ಅಲ್ಪ ದರಕ್ಕೆ ಟೆಂಡರ್ ತಗೆದುಕೊಂಡು ಲಕ್ಷ ಲಕ್ಷ ಬಾಡಿಗೆ ವಸೂಲಿ – ಲಕ್ಷ ಲಕ್ಷ ಬಾಡಿಗೆ ಪಾವತಿ ಲೆಕ್ಕಾ ಹೇಳಿದ್ರು ಮೌನ ಮೌನ…..ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಏನು ಮಾಡಿದ್ರು ನಡೆಯುತ್ತದೆ…..ಹೇಗಿದೆ ನೋಡಿ MD ಯವರೇ…..

Suddi Sante Desk
ಅಲ್ಪ ದರಕ್ಕೆ ಟೆಂಡರ್ ತಗೆದುಕೊಂಡು ಲಕ್ಷ ಲಕ್ಷ ಬಾಡಿಗೆ ವಸೂಲಿ – ಲಕ್ಷ ಲಕ್ಷ ಬಾಡಿಗೆ ಪಾವತಿ ಲೆಕ್ಕಾ ಹೇಳಿದ್ರು ಮೌನ ಮೌನ…..ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಏನು ಮಾಡಿದ್ರು ನಡೆಯುತ್ತದೆ…..ಹೇಗಿದೆ ನೋಡಿ MD ಯವರೇ…..

ಧಾರವಾಡ

ಅಲ್ಪ ದರಕ್ಕೆ ಟೆಂಡರ್ ತಗೆದುಕೊಂಡು ಲಕ್ಷ ಲಕ್ಷ ಬಾಡಿಗೆ ವಸೂಲಿ – ಲಕ್ಷ ಲಕ್ಷ ಬಾಡಿಗೆ ಪಾವತಿ ಲೆಕ್ಕಾ ಹೇಳಿದ್ರು ಮೌನ ಮೌನ…..ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಏನು ಮಾಡಿದ್ರು ನಡೆಯುತ್ತದೆ…..

ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಹೊಸ ಟೆಂಡರ್ ನ್ನು ಕೇವಲ 1 ಲಕ್ಷ 91 ಸಾವಿರ ರೂಪಾಯಿಗೆ ಆಗಿದ್ದು ಲೆಕ್ಕ ದಲ್ಲಿ ಒಂದು.ಟೆಂಡರ್ ತಗೆದುಕೊಂಡಿ ದ್ದರೆ ಬಾಡಿಗೆಯಲ್ಲಿ ಬೇರೆ ಲೆಕ್ಕ ಇದೆ  ಒಂದು ಹೊಟೇಲ್ ಗೆ ಎರಡೂವರೆ ಲಕ್ಷ,ಧಾರವಾಡ ಫೇಮಸ್ ಪೇಢಾ ಮಳಿಗೆಗೆ ಎರಡೂ ಲಕ್ಷ 10 ಸಾವಿರ ಇನ್ನೂಳಿ ದಂತೆ ಲಾಡ್ಜ್ ನಲ್ಲಿ ರೂಮ್ಸ್,ಹಾಗೆ ಹತ್ತಕ್ಕೂ ಹೆಚ್ಚು ಅಂಗಡಿಗಳನ್ನು ಕೂಡಾ ಮಾಡಲಾಗಿದೆ

ಇವೆಲ್ಲಾ ಸೇರಿದರೆ ಬರೊಬ್ಬರಿ ಪ್ರತಿ ತಿಂಗಳು 10 ಲಕ್ಷಕ್ಕೂ ಹೆಚ್ಚು ಬಾಡಿಗೆ ಆದಾಯ ಬರುತ್ತದೆ.ಆದರೆ ಅಲ್ಪ ದರಕ್ಕೆ ಟೆಂಡರ್ ತಗೆದುಕೊಂಡಿರುವ ವ್ಯಕ್ತಿ ಯೊಬ್ಬರು ಸಧ್ಯ ಪ್ರತಿ ತಿಂಗಳು ಹತ್ತಾರು ಲಕ್ಷ ರೂಪಾಯಿ ಬಾಡಿಗೆಯನ್ನು ವಸೂಲಿ ಮಾಡುತ್ತಿ ದ್ದಾರೆ.

ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ತಾವು ನಿಗದಿ ಮಾಡಿದ ಹಣಕ್ಕೆ ವಾಣಿಜ್ಯ ಮಳಿಗೆಯ ಅಂಗಡಿಗಳನ್ನು ಬಾಡಿಗೆ ನೀಡಿದ್ದಾರೆ.ಯಾವುದೇ ಬಾಡಿಗೆಯನ್ನು ನಿಗದಿ ಮಾಡಲು ಒಂದಿಷ್ಟು ನಿಯಮಗಳು ಇವೆ ಅದರಲ್ಲೂ ಸರ್ಕಾರಿ ಸ್ಥಳದಲ್ಲಿ ಅಂದರೆ ಇನ್ನೂ ತುಂಬಾ ಕಟ್ಟುನಿಟ್ಟು ಹೀಗಿರುವಾಗ ಯಾವುದೇ ನಿಮಯಗಳನ್ನು ಲೆಕ್ಕಿಸದೇ ಬಾಯಿಗೆ ಬಂದಂತೆ ಹಾಗೆ ಲಕ್ಷ ಲಕ್ಷ ಬಾಡಿಗೆಯನ್ನು ಫೀಕ್ಸ್ ಮಾಡಿ ಬಾಡಿಗೆ ನೀಡಿ ವಸೂಲಿ ಮಾಡುತ್ತಿದ್ದಾರೆ.

ಸುದ್ದಿ ಸಂತೆ ಟೀಮ್ ಈ ಒಂದು ವಿಚಾರವನ್ನು ಬೆಳಕಿಗೆ ತಗೆದುಕೊಂಡು ಬಂದ ನಂತರ ಲಕ್ಷ ಲಕ್ಷ ಬಾಡಿಗೆ ಕೋಡುತ್ತಿರುವವರನ್ನು ಕರೆಯಿಸಿ ಸಾರಿಗೆ ಇಲಾಖೆಯ ಅಧಿಕಾರಿಗಳು ವಿಚಾರಿಸಿದ್ದಾರೆ ಬಾಡಿಗೆ ನೀಡುತ್ತಿರುವ ಕುರಿತಂತೆ ದಾಖಲೆಯನ್ನು ಕೂಡಾ ನೀಡಿದ್ದಾರೆ ಇದೆಲ್ಲಾ ಕಂಪ್ಲೀಟ್ ಮಾಹಿತಿಯನ್ನು ಪಡೆದುಕೊಂಡ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಬಾಡಿಗೆಯನ್ನು ವಸೂಲಿ ಮಾಡುತ್ತಿರುವರ ಮೇಲೆ ಕಡಿವಾಣವನ್ನು ಹಾಕದೇ ತಪ್ಪನ್ನು ಬೆಳಕಿಗೆ ತಂದ ಮಾಧ್ಯಮದವರ ಮೇಲೆ ಕೇಸ್ ಮಾಡಿಸಲು ಸಲಹೆ ನೀಡಿದ್ದಾರೆ

ಇದ್ಯಾವ ನ್ಯಾಯ ಸ್ವಾಮಿ ಇನ್ನಾದರೂ ನೋಡಿ ಸಮಸ್ಯೆ ಪರಿಹಾರ ಮಾಡುವ ಪ್ರಯತ್ನ ಮಾಡಿ ಅಂದಾಗ ಮಾತ್ರ ವ್ಯಾಪಾರಿಗಳು ಸಂತೋಷ ಪಡುತ್ತಾರೆ ಇಲ್ಲವಾದರೆ……

 

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.