ಹುಬ್ಬಳ್ಳಿ –
ಮೇಯರ್ ಜೊತೆ ಮಾತುಕತೆ ಹೊಸ ವರ್ಷಕ್ಕೆ ಅವಳಿ ನಗರದ ಜನತೆಗೆ ಹೊಸ ಕಾರ್ಯಕ್ರಮ ಆರಂಭ ಮಾಡಿದ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ – ಅವಳಿ ನಗರದ ಸಮಸ್ಯೆಗೆ ಪ್ರತಿ ಒಂದು ದಿನ ವೇದಿಕೆ ಕಲ್ಪಿಸಿದ ಆಯುಕ್ತರು…..ನಿಮ್ಮ ಸಮಸ್ಯೆಗೆ ಸಿಗಲಿದೆ ತ್ವರಿತವಾಗಿ ಸಿಗಲಿದೆ ಪರಿಹಾರ…..
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಈಗ ಮತ್ತಷ್ಟು ಜನ ಸ್ನೇಹಿಯಾಗುತ್ತಿದೆ.ಹೌದು ಈಗಾಗಲೇ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಅಭಿವೃದ್ದಿ ಮಾಡುತ್ತಿರುವ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ಸಧ್ಯ ಅವಳಿ ನಗರದ ಜನತೆಗೆ ಕೊಟ್ಟ ಭರವಸೆಯಂತೆ ಮತ್ತೊಂದು ಹೊಸ ಕಾರ್ಯಕ್ರಮವನ್ನು ಆರಂಭ ಮಾಡುತ್ತಿದ್ದಾರೆ.
ಈ ಹಿಂದೆ ಆಯುಕ್ತರು ಹುಬ್ಭಳ್ಳಿ ಧಾರವಾಡ ಜನತೆಗೆ ಸಮಸ್ಯೆಗಳಿಗೆ ತ್ವರಿತ ಪರಿಹಾರದ ಭರವಸೆಯನ್ನು ನೀಡಿದ್ದರು ಸಧ್ಯ ಈ ಒಂದು ಭರವಸೆಯನ್ನು ಆಯುಕ್ತರು ಜನತೆಗೆ ಈಡೇರಿಸುತ್ತಿದ್ದಾರೆ.ಈಗಾಗಲೇ ಸದಾ ಒಂದಿಲ್ಲೊಂದು ವಿಶೇಷವಾದ ಕಾರ್ಯಕ್ರಮಗಳ ಮುೂಲಕ ಜನತೆಗೆ ಸ್ನೇಹಿಯಾಗಿರುವ ಪಾಲಿಕೆಯ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿ ಆಯುಕ್ತರು ಮಾಡುತ್ತಿದ್ದಾರೆ.ಸಮಸ್ಯೆಗಳ ಪರಿಹಾರಕ್ಕೆ ದಿಟ್ಟ ಹೆಜ್ಜೆ ಇಡುವ ಮೂಲಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಈಗ ಹೊಸದೊಂದು ಕಾರ್ಯ ಕ್ರಮವನ್ನು ಆರಂಭ ಮಾಡಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜ್ಯ ದಲ್ಲಿಯೇ ದೊಡ್ಡ ಎರಡನೇಯ ಪಾಲಿಕೆಯಾಗಿದ್ದು ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದೆ ಇದರೊಂದಿಗೆ ಸಮಸ್ಯೆಗಳು ಕೂಡಾ ಹೆಚ್ಚುತ್ತಿದ್ದು ಇದನ್ನು ಅರಿತ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿಯವರು ಸಮಸ್ಯೆಗಳ ಪರಿಹಾರಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದು ಈ ಒಂದು ನಿಟ್ಟಿನಲ್ಲಿ ಸಧ್ಯ ಮೇರಯ್ ದದೊತೆ ಮಾತುಕತೆ ಎಂಬ ಹೊಸ ಕಾರ್ಯಕ್ರಮವನ್ನು ಆರಂಭ ಮಾಡುತ್ತಿದ್ದಾರೆ.
ಒಟ್ಟು 82 ವಾರ್ಡ್ ಗಳನ್ನು ಹೊಂದಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅವಳಿ ನಗರದ ಜನರಿಗಾಗಿ ಹೊಸದೊಂದು ಕಾರ್ಯಕ್ರಮ ಆರಂಭ ಮಾಡುವುದರೊಂದಿಗೆ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ.
ಕುಡಿಯುವ ನೀರು, ಕಸ ವಿಲೇವಾರಿ, ರಸ್ತೆ ಸಮಸ್ಯೆ, ಬೀದಿ ದೀಪ, ಒಳಚರಂಡಿ ಸಮಸ್ಯೆ ಸೇರಿದಂತೆ ಏನೇ ಸಮಸ್ಯೆ ಇದ್ದರೂ ತ್ವರಿತ ಪರಿಹಾರ ಸಿಗುವ ಭರವಸೆ ಯನ್ನು ಈಗಾಗಲೇ ಆಯುಕ್ತರು ಮತ್ತು ಮೇಯರ್ ಅವರು ಅವಳಿ ನಗರದ ಜನತೆಗೆ ನೀಡಿದ್ದಾರೆ.
ಪ್ರತಿ ತಿಂಗಳು ಮೊದಲ ಬುಧವಾರ ಒಂದು ದಿನ ಸಾರ್ವಜನಿಕರೊಂದಿಗೆ ಮಾತನಾಡಲಿದ್ದಾರೆ ಮೇಯರ್.ಮೇಯರ್ ಜೊತೆ ಮಾತುಕತೆ ವಿನೂತನ ಕಾರ್ಯಕ್ರಮವನ್ನು ಆರಂಭ ಮಾಡುವ ಮೂಲಕ ಹೊಸದೊಂದು ದಿಟ್ಟವಾದ ಹೆಜ್ಜೆಯನ್ನು ಇಟ್ಟಿದ್ದಾರೆ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು.
ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಿ ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಆಯುಕ್ತರ ದಿಟ್ಟ ಹೆಜ್ಜೆ ಇಟ್ಟಿದ್ದು 8277802331 ಕರೆ ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ ಎಂದಿದ್ದಾರೆ. ಸಮಸ್ಯೆಗಳಿಂದ ಬೇಸತ್ತ ಅವಳಿ ನಗರದ ಜನತೆಗೆ ನೆಮ್ಮದಿಯ ಸಂತೋಷದ ಸುದ್ದಿ ನೀಡಿದ್ದಾರೆ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..