ಹಾವೇರಿ –
ಸಾಮಾನ್ಯವಾಗಿ ಹುಟ್ಟು ಹಬ್ಬ ಇಲ್ಲವೇ ಮದುವೆಯ ವಾರ್ಷಿಕೊತ್ಸವ ಇದೆ ಅಂದಾಕ್ಷಣ ಸಾಕು ಕುಟುಂಬ ಸಮೇತರಾಗಿ ಎಲ್ಲಿಗಾದರೂ ಹೋಗಿ ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ ಪಾರ್ಟಿ ಮಾಡುತ್ತೇವೆ ಇದು ಸರ್ವೆ ಸಾಮಾನ್ಯ ಆದರೆ ಇಲ್ಲೊಬ್ಬ ಶಿಕ್ಷಕಿಯೊಬ್ಬರು ತಮ್ಮ ಮದು ವೆಯ ವಾರ್ಷಿಕೊತ್ಸವವನ್ನು ವಿಭಿನ್ನವಾಗಿ ಆಚರಣೆ ಮಾಡಿಕೊಂಡಿದ್ದಾರೆ.ಹೌದು ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಶ್ರೀಮತಿ ತನುಜಾ ಚಂದ್ರಿಕೇರ ಅವರೇ ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡು ಸರ್ಕಾರಿ ಶಾಲಾ ಶಿಕ್ಷಕ ಬಂಧು ಗಳಿಗೆ ಮಾದರಿಯಾಗಿದ್ದಾರೆ.
ಅಲ್ಲದೇ ಇವರು ಮಾಡಿದ ಕೆಲಸದಿಂದ ಸಂತೋಷಗೊಂಡಿ ದ್ದಾರೆ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು.ಶ್ರೀಮತಿ ತನುಜಾ ಚಂದ್ರಿಕೆರ ಅವರು ಸಹ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕೋಣತಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು ಪ್ರತಿಯೊಂದು ಕಾರ್ಯದಲ್ಲೂ ವಿಶೇಷ ವಾಗಿ ಮಾಡಿಕೊಂಡು ಬರುತ್ತಿರುವ ಇವರು ತಮ್ಮ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ತಮ್ಮ ಶಾಲೆಯ 5,6,7,8 ನೇ ತರಗತಿಯ ವಿದ್ಯಾರ್ಥಿಗಳಿಗೆ ಡಿಕ್ಷನರಿ ಗಳನ್ನು ನೀಡಿದರು
ಈ ಸಂದರ್ಭದಲ್ಲಿ ಶಿಕ್ಷಕಿ ಕಾರ್ಯಕ್ಕೆ ಮುಖ್ಯ ಗುರುಗಳು, ಸಹ ಶಿಕ್ಷಕರು ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿ ಸಿದ್ದು ಇದರೊಂದಿಗೆ ಕೇವಲ ಬೋಧನೆ ಅಷ್ಟೇ ಅಲ್ಲದೇ ಜವಾಬ್ದಾರಿ ಏನು ಎಂಬೊದನ್ನು ತೋರಿಸಿಕೊಟ್ಟಿದ್ದಾರೆ ಈ ಗುರುಮಾತೆ. ಇನ್ನೂ ಇದರೊಂದಿಗೆ ಈ ಹಿಂದೆ ಶಾಲೆಗೆ ಸೇರಿಕೊಂಡ ನಂತರ ದಾನಿಗಳ ಸಹಾಯದೊಂದಿಗೆ ಇದೇ ಶಾಲೆಯ 106 ಮಕ್ಕಳಿಗೆ ಜನೆವರಿ 26 2019ರಂದು ಟೀ ಶರ್ಟ್ ಮತ್ತು ಮಧ್ಯಾಹ್ನದ ಊಟದಲ್ಲಿ ಸಿಹಿ ಲಾಡು ವಿತರಣೆ ಮಾಡಿದರು.ಇದರೊಂದಿಗೆ ಇವರು ಶಾಲಾ ಮಕ್ಕಳಿಗೆ ದಾನಿಗಳ ಕೈಗಳೊಂದಿಗೆ ತಮ್ಮ ಹಣದಿಂದ ಟೀ ಶರ್ಟ್ ನೀಡಿ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗೆ ಪ್ರೇರಣೆ ಯಾಗಿದ್ದಾರೆ.

























