ಕೋಲ್ಕತ್ತಾ –
ಹೌದು ಶಿಕ್ಷಕ ನೊಬ್ಬ ಅಪ್ರಾಪ್ತ ಬಾಕಲಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನ ಮಾಡಲಾ ಗಿದೆ.ಹೌದು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಎಕ್ಪಾಲ್ ಬೋರ್ ಪ್ರದೇಶದಲ್ಲಿ ತನ್ನ ಮನೆಯಲ್ಲಿ ವಿಶೇಷ ತರಗತಿ ಪಾಠ ಕೇಳಲು ಬಂದಿದ್ದ ವಿದ್ಯಾರ್ಥಿನಿಗೆ ಟ್ಯೂಷನ್ ಶಿಕ್ಷಕ ಕಿರುಕುಳ ನೀಡಿದ್ದಾನೆ.ಬಾಲಕಿಯ ಆರೋಪದ ಮೇಲೆ ಪೊಲೀಸರು 40 ವರ್ಷದ ಜೀವಶಾಸ್ತ್ರ ಶಿಕ್ಷಕನನ್ನು ಬಂಧಿಸಿದ್ದಾರೆ.ಸಂತ್ರಸ್ತೆ ತನ್ನ ಪರೀಕ್ಷೆಗೆ ಮುಂಚಿತವಾಗಿ ಟ್ಯೂಷನ್ ತೆಗೆದುಕೊಳ್ಳಲು ಆರೋಪಿಯ ಮನೆಗೆ ಹೋಗಿ ದ್ದಳು.ಬಾಲಕಿಯ ತಂದೆಯ ದೂರಿನ ಮೇರೆಗೆ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಿಕ್ಷಕನ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ), POCSO ಮತ್ತು ಕಿರುಕುಳದ ಸೆಕ್ಷನ್ ಅಡಿಯಲ್ಲಿ ದಾಖಲಿಸ ಲಾಗಿದೆ.ಸಂತ್ರಸ್ತೆಯ ತಂದೆ ಅಕ್ಟೋಬರ್ 7 ರಂದು ಪೊಲೀ ಸರನ್ನು ಸಂಪರ್ಕಿಸಿದ್ದು ತನ್ನ ಮಗಳೊಂದಿಗೆ ಟ್ಯೂಷನ್ ಶಿಕ್ಷಕ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಶಿಕ್ಷಕ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ಸ್ಪರ್ಶಿಸಿ ಬಲವಂತವಾಗಿ ಮುತ್ತು ಕೊಡಲು ಪ್ರಯತ್ನಿಸಿದ ಎಂದು ತಂದೆ ಆರೋಪಿಸಿದ್ದಾರೆ ವಿದ್ಯಾರ್ಥಿನಿಯ ಒಂಟಿತನದ ಲಾಭವನ್ನು ಪಡೆಯಲು ಪ್ರಯತ್ನಿಸಿದ ಶಿಕ್ಷಕ ಮನೆಯಲ್ಲಿ ಅವಳ ಟ್ಯೂಷನ್ ತರಗತಿಗಳಲ್ಲಿ ಒಬ್ಬಳೇ ಕೋಣೆಯಲ್ಲಿ ಉಳಿಯುವಂತೆ ತಿಳಿಸಿದ್ದನಂತೆ.