ಮುದ್ದೇಬಿಹಾಳ –
ಹೋಮ್ ವರ್ಕ್ ಮಾಡಿಕೊಂಡು ಬಾರದ 7ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಕೆನ್ನೆಗೆ ಒಂದೇಟು ಹಾಕಿ ಗದರಿದ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರಿಗೆ ವಿದ್ಯಾರ್ಥಿ ನಿಯ ತಂದೆಯೇ ತೀವ್ರ ಹಲ್ಲೆ ನಡೆಸಿದ ಘಟನೆ ವಿಜಯ ಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ನೇಬಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ಶಿಕ್ಷಕ ಭೀಮಸಿಂಗ್ ರಾಠೋಡ ಹಲ್ಲೆಗೊಳಗಾದವರಾಗಿದ್ದು ವಿದ್ಯಾರ್ಥಿನಿಯ ತಂದೆ ರವಿಕುಮಾರ ಲಮಾಣಿ ಹಲ್ಲೆ ನಡೆಸಿದ ವ್ಯಕ್ತಿಯಾಗಿದ್ದಾನೆ.
ರವಿಕುಮಾರನು ಭೀಮಸಿಂಗನ ಸೊಂಟದ ಕಿಬ್ಬೊಟ್ಟೆಯ ಕೆಳಭಾಗಕ್ಕೆ ಮೊಣಕಾಲಿನಿಂದ ಗುದ್ದಿದ್ದರಿಂದ ಅವರು ತೀವ್ರ ಅಸ್ವಸ್ಥರಾಗಿದ್ದರು.ಇಲ್ಲಿನ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ವೇಳೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷ ಬಿ.ಎಚ್.ಮುದ್ನೂರ ಮತ್ತಿತರ ರು ಆಸ್ಪತ್ರೆಗೆ ಆಗಮಿಸಿ ಶಿಕ್ಷಕರ ಆರೋಗ್ಯ ವಿಚಾರಿಸಿ ಘಟನೆಯ ಮಾಹಿತಿ ಪಡೆದುಕೊಂಡರು.ಈ ವೇಳೆ ಸುದ್ದಿಗಾ ರರೊಂದಿಗೆ ಮಾತನಾಡಿದ ಹಲ್ಲೆಗೊಳಗಾದ ಶಿಕ್ಷಕ ಭೀಮ ಸಿಂಗ ಅವರು ಹೋಮ್ ವರ್ಕ್ ಏಕೆ ಮಾಡಿಲ್ಲ ಎಂದು ವಿದ್ಯಾರ್ಥಿನಿಗೆ ಒಂದೇಟು ಮೆತ್ತಗೆ ಹೊಡೆದಿದ್ದೆ.ಆಕೆ ಇದನ್ನೇ ದೊಡ್ಡದು ಮಾಡಿ ಮನೆಗೆ ಹೋಗಿ ತನ್ನ ತಂದೆಯನ್ನು ಕರೆತಂದಳು.ಈ ವೇಳೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ನನ್ನ ಜೊತೆ ಆಕೆಯ ತಂದೆ ರವಿಕುಮಾರ ಜಗಳಕ್ಕೆ ಬಿದ್ದ. ನನ್ನನ್ನು ಬಲವಾಗಿ ಹಿಡಿದುಕೊಂಡು ಕಿಬ್ಬೊಟ್ಟೆಯ ಕೆಳ ಭಾಗಕ್ಕೆ ಮೊಣಕಾಲಿನಿಂದ ಗುದ್ದಿದ.ನನಗೆ ತೀವ್ರ ಅಸ್ವಸ್ಥತೆ ಕಾಡುತ್ತಿದೆ.ಇಂಥ ಘಟನೆಗೆ ಕಡಿವಾಣ ಹಾಕಲು ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಎಂಎಲ್‍ಸಿ (ಮೆಡಿಕೋ ಲೀಗಲ್ ಕೇಸ್) ಪ್ರಕರಣ ದಾಖಲಿಸಿದ್ದೇನೆ ಎಂದರು.
ಅಧ್ಯಕ್ಷ ಬಿ.ಎಚ್.ಮುದ್ನೂರ ಮಾತನಾಡಿ ಶಿಕ್ಷಕರು ಹೋಮ್ ವರ್ಕ್ ಮಾಡಿಕೊಂಡು ಬಾರದ ಮಕ್ಕಳಿಗೆ ಒಂದೇಟು ಹೊಡೆದು ಬುದ್ದಿ ಹೇಳುವ ಹಕ್ಕೂ ಇಲ್ಲವೇ ಎಂದು ಪ್ರಶ್ನಿಸಿ ಹಲ್ಲೆಯ ಘಟನೆಯನ್ನು ಬಲವಾಗಿ ಖಂಡಿಸಿ ದರು.ಹಲ್ಲೆ ನಡೆಸಿದ ವ್ಯಕ್ತಿಯನ್ನು ಆತ ಮುಂದೆ ಹೀಗೆ ಮಾಡದಂತೆ ಬುದ್ದಿವಾದ ಹೇಳಿ ಶಿಕ್ಷಿಸುವಂತೆ ಪೊಲೀಸ ರನ್ನು ಆಗ್ರಹಿಸುವುದಾಗಿ ಹೇಳಿದರು.ಅಸ್ವಸ್ಥನಾಗಿದ್ದ ಶಿಕ್ಷಕ ಗೆ ವೈದ್ಯಾಧಿಕಾರಿ ಡಾ| ಪರಶುರಾಮ ವಡ್ಡರ ಚಿಕಿತ್ಸೆ ನೀಡಿದ್ದು ಅವರು ಚೇತರಿಸಿಕೊಂಡಿದ್ದಾರೆ.ಎಂಎಲ್‍ಸಿ ಪ್ರಕರಣ ಇದಾಗಿರುವುದರಿಂದ ಸ್ಥಳೀಯ ಪೊಲೀಸ್ ಠಾಣೆಯ ಕರ್ತವ್ಯದಲ್ಲಿದ್ದ ಮುಖ್ಯ ಮಹಿಳಾ ಪೇದೆಯೊ ಬ್ಬರು ಆಸ್ಪತ್ರೆಗೇ ಆಗಮಿಸಿ ಶಿಕ್ಷಕರಿಂದ ಹೇಳಿಕೆ ದಾಖಲಿ ಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.