ಶಿಕ್ಷಕ ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ಇನ್ನೂ ನೆನಪು ಮಾತ್ರ – ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೇಸ್ ಪಕ್ಷದ ನಾಯಕನಿಗೆ ಸಂತಾಪ ಸೂಚಿಸಿದ ರಾಜಕೀಯ ನಾಯಕರು

Suddi Sante Desk
ಶಿಕ್ಷಕ ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ಇನ್ನೂ ನೆನಪು ಮಾತ್ರ – ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೇಸ್ ಪಕ್ಷದ ನಾಯಕನಿಗೆ ಸಂತಾಪ ಸೂಚಿಸಿದ ರಾಜಕೀಯ ನಾಯಕರು

ಹುಬ್ಬಳ್ಳಿ  –

 

 

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ನಿಧನರಾಗಿದ್ದಾರೆ. ಹೌದು ಕಳೆದ ಕೆಲ ದಿನಗಳಿಂದ ಆನಾರೋಗ್ಯ ದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ನಗರದ ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು.

 

ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯು ಸಿರೆಳೆದಿದ್ದಾರೆ.ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಹೊನ್ನಳ್ಳಿ ಎಸ್‌ ಆರ್ ಬೊಮ್ಮಾಯಿರಿಂದ ಪ್ರೇರಿತರಾಗಿ ಜೆಡಿಎಸ್‌ ಸೇರುವುದರೊಂದಿಗೆ ರಾಜಕೀಯ ಪ್ರವೇಶಿಸಿದ್ದರು ನಂತರ ರಾಮಕೃಷ್ಣ ಹೆಗಡೆಯ ಲೋಕಶಕ್ತಿ, ಕಾಂಗ್ರೆಸ್ ಹಾಗೂ ಬಿಎಸ್‌ ಯಡಿಯೂರಪ್ಪ ನೇತೃತ್ವದ ಕೆಜಿಪಿಯನ್ನೂ ಸೇರಿದ್ದರು.ಹುಬ್ಬಳ್ಳಿ ನಗರ ವಿಧಾನಸಭಾ ಕ್ಷೇತ್ರ ದಿಂದ ಕಾಂಗ್ರೆಸ್‌ನಿಂದ ಎರಡು ಸಲ ಗೆದ್ದಿದ್ದ ಹೊನ್ನಳ್ಳಿ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಯಾಗಿದ್ದ ವೇಳೆ ಯುವಜನ ಮತ್ತು ಕ್ರೀಡಾ ಸಚಿವರಾಗಿ ಜನಪರ ಕೆಲಸಗಳನ್ನು ಮಾಡಿದ್ದರು

 

 

ಎರಡು ಬಾರಿ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು .ಜಾತಿ, ಧರ್ಮವನ್ನು ಬದಿಗೊತ್ತಿದ್ದ ಹೊನ್ನಳ್ಳಿ ಎಲ್ಲ ವರ್ಗದ ಜನರ ಕಷ್ಟಗಳಿಗೂ ಸ್ಪಂದಿಸುತ್ತಿದ್ದರು. ಜನರಿಗಾಗಿ ಏನಾದರೂ ಒಳ್ಳೆಯ ಕೆಲಸ ಮಾಡ ಬೇಕೆಂಬ ತುಡಿತ ಅವರಲ್ಲಿತ್ತು ಅವರ ಅಗಲಿಕೆಗೆ ಹುಬ್ಬಳ್ಳಿ ನಗರದ ಜನತೆ ಕಂಬನಿ ಮಿಡಿದಿದ್ದಾರೆ

 

ಇನ್ನೂ ಮೃತರ ಅಂತ್ಯಕ್ರಿಯೆ ನಗರದ ತೊರವಿ ಹಕ್ಕಲದಲ್ಲಿರುವ ಖಬರಸ್ತಾನದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದ್ದು ಮೃತರಾದ ಮಾಜಿ ಸಚಿವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್,ಸಚಿವ ಶಂಕರ ಪಾಟೀಲ ಮುನೇನಕೊಪ್ಪ,ಶಾಸಕರಾದ ಅಮೃತ ದೇಸಾಯಿ,ಅರವಿಂದ ಬೆಲ್ಲದ,ಪ್ರಸಾದ ಅಬ್ಬಯ್ಯ ಮಾಜಿ ಸಚಿವರಾದ ಸಂತೋಷ ಲಾಡ್ವಿ ನಯ ಕುಲಕರ್ಣಿ ಸೇರಿದಂತೆ ಹಲವರು ಸಂತಾಪ ವನ್ನು ಸೂಚಿಸಿ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.