ಬೆಂಗಳೂರು –
ಬೆಳ್ಳಂ ಬೆಳಿಗ್ಗೆ ರಾಜ್ಯದಲ್ಲಿ ಶಿಕ್ಷಕರೊಬ್ಬರು ಹೃದಯಾ ಘಾತದಿಂದ ನಿಧನರಾಗಿದ್ದಾರೆ. ಹೌದು ಎಂದಿನಂತೆ ನಿನ್ನೆ ಶಾಲೆಯನ್ನು ಮುಗಿಸಿಕೊಂಡು ಬಂದು ರಾತ್ರಿ ಕುಟುಂಬದ ವರೊಂದಿಗೆ ಊಟವನ್ನು ಮಾಡಿ ಮಲಗಿಕೊಂಡು ಬೆಳಿಗ್ಗೆ ಇನ್ನೇನು ಶಾಲೆಗೆ ಹೋಗಬೇಕು ಎಂದುಕೊಂಡಿದ್ದ ಶಿಕ್ಷಕ ರೊಬ್ಬರು ನಿಧನರಾಗಿದ್ದಾರೆ.ಗದಗ ಜಿಲ್ಲೆಯ ಕಣವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯವನ್ನು ಮಾಡುತ್ತಿದ್ದು ಎಫ್ ಎಂ ಕಿಲ್ಲೆದಾರ ಮೃತ ರಾದ ಶಿಕ್ಷಕರಾಗಿದ್ದಾರೆ.
ಬೆಳಗಿನ ಜಾವ ಐದು ಗಂಟೆಗೆ ಮಲಗಿಕೊಂಡಾಗ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋದರು ಆದ್ರೂ ಚಿಕಿತ್ಸೆ ನೀಡುವ ಮುನ್ನವೇ ಶಿಕ್ಷಕರು ನಿಧನರಾಗಿದ್ದಾರೆ.ಇನ್ನೂ ಐದು ವರ್ಷಗಳ ಸೇವೆ ಇದ್ದ ಇವರು ತುಂಬಾ ಉತ್ಸಾಹಿ ಆದರ್ಶ ಒಳ್ಳೇಯ ಶಿಕ್ಷಕರಾಗಿದ್ದು ಹೊಸ ಹೊಸ ಆಲೋ ಚನೆ ಮಾದರಿಗಳ ಮೂಲಕ ಜನಾನುರಾಗಿಯಾಗಿ ದ್ದರು ಇನ್ನೂ ಮೃತರಾದ ಇವರಿಗೆ ಗದಗ ಜಿಲ್ಲೆಯ ಸಮಸ್ತ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ.ಹಾಗೇ ತಾಲ್ಲೂ ಕಿನ ಶಾಲೆಯ ಶಿಕ್ಷಕರು ಇಲಾಖೆಯ ಸಿಬ್ಬಂದಿಗಳು ಬಿಇಓ ಎಮ್ ಎನ್ ರಡ್ಡೇರ ಸೇರಿದಂತೆ ಹಲವರು ಸಂತಾಪವನ್ನೂ ಸೂಚಿಸಿದ್ದಾರೆ.ಮೃತರಾದ ಶಿಕ್ಷಕರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ 2 00 ಗಂಟೆಗೆ ಹುಟ್ಟೂರು ಕಣವಿಯಲ್ಲಿ ನಡೆಯಲಿದೆ.