ವಿಜಯಪುರ –
ಮುಂಬಡ್ತಿ ಪಡೆದ ಶಿಕ್ಷಕಿಯೊಬ್ಬರನ್ನು ಕರ್ತವ್ಯ ಸ್ಥಳದಿಂದ ಬಿಡುಗಡೆ ಮಾಡಿ ಚಾಲನಾ ಆದೇಶ ನೀಡಲು ಕಡತ ಮಂಡಿಸಲು ಲಂಚ ಸ್ವೀಕರಿಸುತ್ತಿದ್ದ ಶಿಕ್ಷಣ ಇಲಾಖೆಯ ಎಸ್‍ಡಿಎ ಎಸಿಬಿ ಬಲೆಗೆ ಬಿದ್ದಿರುವ ಘಟನೆ ವಿಜಯಪುರ ದಲ್ಲಿ ನಡೆದಿದೆ.ಇಟ್ಟಂಗಿಹಾಳ ಸರ್ಕಾರಿ ಪ್ರಾಥಮಿಕ ಶಾಲೆ ಯಲ್ಲಿ ಶಿಕ್ಷಕಿಯಾಗಿದ್ದ ಸರೋಜಿನಿ ಹೂಗಾರ ಎಂಬವರು ಮುಖ್ಯೋಪಾದ್ಯಾಯ ಹುದ್ದೆಗೆ ಬಡ್ತಿ ಪಡೆದಿದ್ದರು.ಬಡ್ತಿ ಪಡೆದು ಇಟ್ಟಂಗಿಹಾಳ ಕೆ.ಎಚ್.ಹಿರಿಯ ಪ್ರಾಥಮಿಕ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು.
ಇದಕ್ಕಾಗಿ ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ವಿಷಯ ನಿರ್ವಾಹಕ ವಿನೋದ ನರಸಿಂದ ರಾಠೋಡ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಇಂದು ಲಂಚದ ಹಣ ಪಡೆಯುವಾಗ ಭ್ರಷ್ಟಾ ಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಡಿಎಸ್ಪಿ ಎಂ.ಕೆ.ಗಂಗಲ್ ನೇತೃತ್ವದಲ್ಲಿ ಸಿಪಿಐಗಳಾದ ಪರಮೇಶ್ವರ ಕವಟಗಿ,ಚಂದ್ರಕಲಾ ಹೊಸಮನಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಲಂಚದ ಹಣದ ಸಮೇತ ಬಂಧಿಸಿ ದ್ದಾರೆ.ಈ ಕುರಿತು ಶಿಕ್ಷಕಿ ಪರವಾಗಿ ವಕೀಲರಾಗಿರುವ ಅವರ ಪತಿ ಈರಗಂಟೆಪ್ಪ ದೂರು ನೀಡಿದ್ದರು.