ತುಮಕೂರು –
ಸರ್ಕಾರಿ ಶಾಲೆಯೊಂದರ ಶಿಕ್ಷಕರೊಬ್ಬರನ್ನು ಅಮಾನತು ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.ಹೌದು ಮದ್ಯ ಸೇವಿಸಿ ಶಾಲೆಗೆ ಬಂದಿದ್ದ ಹಿನ್ನಲೆಯಲ್ಲಿ ಇವರನ್ನು ಸಾರ್ವ ಜನಿಕರ ದೂರಿನ ಹಿನ್ನಲೆಯಲ್ಲಿ ಅಮಾನತು ಮಾಡಿ ಆದೇಶವನ್ನು ಮಾಡಲಾಗಿದೆ ಕಾಂತರಾಜು ಎಂಬ ಶಿಕ್ಷಕರೇ ಅಮಾನತಾಗಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹೊಸಕೆರೆ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.ಒಂದೂವರೆ ತಿಂಗಳ ಹಿಂದೆ ರಾಮನಗರ ಜಿಲ್ಲೆಯಿಂದ ಕುಣಿಗಲ್ ತಾಲ್ಲೂಕಿನ ಹೊಸಕೆರೆ ಶಾಲೆಗೆ ಇವರು ವರ್ಗಾವಣೆ ಗೊಂಡಿದ್ದರು.ಕುಡಿದು ಬಂದು ಪಾಠ ಮಾಡುತ್ತಿದ್ದುದರಿಂದ ಗ್ರಾಮಸ್ಥರು ಬಿಇಒ ತಿಮ್ಮರಾಜುಗೆ ದೂರು ನೀಡಿದ್ದರು ಈ ಹಿಂದೆಯೇ ಎರಡು ಬಾರಿ ಗ್ರಾಮಸ್ಥರು ಎಚ್ಚರಿಕೆ ಕೊಟ್ಟಿದ್ದರು.

ಆದರೂ ಪುನಃ ಕುಡಿದು ಬಂದ ಹಿನ್ನೆಲೆಯಲ್ಲಿ ದೂರು ದಾಖಲು ಮಾಡಲಾಗಿತ್ತು.ನಂತರ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾಂತರಾಜುನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಕಾಂತರಾಜು ಮದ್ಯಪಾನ ಮಾಡಿರುವುದು ದೃಢವಾಗಿದ್ದರಿಂದ ಅಮಾನತು ಮಾಡಲಾಗಿದೆ.