ಬೈಕ್ ಅಪಘಾತ ಶಿಕ್ಷಕ ಸಾವು – ಶಿಕ್ಷಕ ಸಾತಪ್ಪ ಸಾವಿಗೆ ನಾಡಿನ ಶಿಕ್ಷಕರ ಸಂತಾಪ…..

Suddi Sante Desk
ಬೈಕ್ ಅಪಘಾತ ಶಿಕ್ಷಕ ಸಾವು – ಶಿಕ್ಷಕ ಸಾತಪ್ಪ ಸಾವಿಗೆ ನಾಡಿನ ಶಿಕ್ಷಕರ ಸಂತಾಪ…..

ಕಲಬುರಗಿ

ರಸ್ತೆ ಅಪಘಾತದಲ್ಲಿ ಶಿಕ್ಷಕರೊಬ್ಬರು ಮೃತ ರಾಗಿರುವ ಘಟನೆ ಕಲಬುರಗಿ ಯಲ್ಲಿ ನಡೆದಿದೆ ಕೋಚಿಂಗ್‌ ಕ್ಲಾಸ್‌ ನಡೆಸುತ್ತಿದ್ದ ಶಿಕ್ಷಕರೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ

ಫರಹತಾಬಾದ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.ಅತನೂರ ಗ್ರಾಮದ ನಿವಾಸಿ ಸಾತಪ್ಪ ಜಮಾದಾರ (36) ಮೃತ ಬೈಕ್ ಸವಾರರಾಗಿದ್ದಾರೆ.ಗ್ರಾಮದಲ್ಲಿ ಕೋಚಿಂಗ್‌ ಕ್ಲಾಸ್‌ ನಡೆಸುತ್ತಿದ್ದರು.

ಕೆಲಸಕ್ಕಾಗಿ ಕಲಬುರಗಿಗೆ ಬೈಕ್‌ ನಲ್ಲಿ ತೆರಳುತ್ತಿದ್ದ ವೇಳೆ ಹಡಗಿಲ ಹಾರುತಿ ಬಳಿ ಹಿಂದಿನಿಂದ ಬಂದ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ಶಿಕ್ಷಕ ಪತ್ನಿ, ಪುತ್ರ ಇಬ್ಬರನ್ನು ಅಗಲಿದ್ದಾರೆ. ಈ ಕುರಿತು ಫರಹ ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.