ಶಿಕ್ಷಕನಿಗೆ ಡಿಕ್ಕಿ ಹೊಡೆದ ವಾಹನ ಸ್ಥಳದಲ್ಲೇ ಶಿಕ್ಷಕ ಲಕ್ಷ್ಮಣ ಸೋಪನರಾವ್ ನಿಧನ…..

Suddi Sante Desk

ಚಿಂಚೋಳಿ (ಕಲಬುರಗಿ) –

ಶಿಕ್ಷಕನಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರೌಢಶಾಲಾ ಶಿಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳ್ಳಿ ತಾಲ್ಲೂಕಿನ ಸುಲೇಪೇಟದಲ್ಲಿ ನಡೆದಿದೆ

ತಾಲ್ಲೂಕಿನ ಗಡಿಕೇಶ್ವಾರ ಸರ್ಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಲಕ್ಷ್ಮಣ ಸೋಪನರಾವ್ ಮೊಟಬಾ (38) ಮೃತಪಟ್ಟ ಶಿಕ್ಷಕರಾಗಿದ್ದಾರೆ.ಸುಲೇಪೇಟ ಪೊಲೀಸ್ ಠಾಣೆ, ಪೊಲೀಸ್ ವಸತಿಗೃಹ ಹಾಗೂ‌ ಮಹಾಂತೇಶ್ವರ ಪೆಟ್ರೊಲ್ ಪಂಪ್ ಸಮೀಪದಲ್ಲಿಯೇ ಘಟನೆ ನಡೆದಿದೆ.ತೀವ್ರವಾಗಿ ಗಾಯ ಗೊಂಡಿದ್ದ ಅವರನ್ನು ಚಿಂಚೋಳಿ ಆಸ್ಪತ್ರೆಗೆ ಕರೆದೊಯ್ಯು ವಾಗ ಶಿಕ್ಷಕ ಕೊನೆಯುಸಿರೆಳೆದಿದ್ದಾರೆ.

ಇನ್ನೂ ಮೃತರು ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಗಣೇಶಪುರ ನಿವಾಸಿಯಾಗಿದ್ದು ಅವರಿಗೆ ಪತ್ನಿ,ಪುತ್ರ ಹಾಗೂ ಪುತ್ರಿ ಇದ್ದಾರೆ.ಸುಲೇಪೇಟ ಠಾಣೆಯ ಪಿಎಸ್‌ಐ ಸುಖಾನಂದ ಸಿಂಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇತ್ತ ಶಿಕ್ಷಕ ನಿಧನದ ಸುದ್ದಿ ತಿಳಿದ ನಾಡಿನ ಮೂಲೆ ಮೂಲೆಗ ಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ಸಂತಾಪ ಸೂಚಿಸಿ ನಮನ ಸಲ್ಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.