ಚಿಕ್ಕೋಡಿ –
ಶಿಕ್ಷಕ ಮೊಹಮ್ಮದ್ ಸಾಧಿಕ್ ಬಂಧನ – ಪ್ರಕರಣ ದಾಖಲಾಗುತ್ತಿದ್ದಂತೆ ವಶಕ್ಕೆ ಪಡೆದ ಪೊಲೀಸರು
ಹೌದು ಮೊಬೈಲ್ನಲ್ಲಿ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗ ಫೋಟೋ ಗಳನ್ನು ಇಟ್ಟು ಕೊಂಡ ಆರೋಪದ ಹಿನ್ನಲೆಯಲ್ಲಿ ಶಿಕ್ಷಕ ಮೊಹಮ್ಮದ್ ಸಾದಿಕ್ ಬಂಧನ ಮಾಡಿದ ಪ್ರಕರಣ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.ಜಿಲ್ಲೆಯ ಚಿಕ್ಕೋಡಿಯ ಸರ್ಕಾರಿ ಶಾಲೆ ಶಿಕ್ಷಕ ಮೊಹ್ಮದ್ ಸಾದಿಕ್ ಮಿಯಾ ಬೇಗ್ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ವರ್ತಿಸಿದ್ದು ಈ ಒಂದು ಕುರಿತಂತೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಗಳನ್ನು ಮುಟ್ಟಿ ದೌರ್ಜನ್ಯವೆಸಗಿರುವ ಆರೋಪ ಕೇಳಿ ಬಂದಿದ್ದು ಪ್ರಕರಣ ದಾಖಲಾದ ಬೆನ್ನಲ್ಲೆ ಇತ್ತ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಗಳನ್ನು ಮುಟ್ಟಿ ವಿಕೃತಿ ಮೆರ ದಿದ್ದಲೇ ಶೌಚಕ್ಕೆ ಹೋಗುತ್ತಿದ್ದಾಗ ಖಾಸಗಿ ಅಂಗಾಂಗದ ಫೋಟೋ ತೆಗೆದುಕೊಂಡು ಬರುವಂತೆ ವಿದ್ಯಾರ್ಥಿನಿಯರಿಗೆ ಶಿಕ್ಷಕ ಮೊಹಮ್ಮದ್ ಸಾದಿಕ್ ಹೇಳುತ್ತಿದ್ದನು
ಈ ಫೋಟೋಗಳನ್ನು ತನ್ನ ಮೊಬೈಲ್ನಲ್ಲಿ ಸೇವ್ ಮಾಡಿಕೊಳ್ಳುತ್ತಿದ್ದನಂತೆ. ಪಾಠ ಮಾಡುವುದನ್ನ ಬಿಟ್ಟು ಕಾಮುಕನಾಗಿ ವಿಕೃತವಾಗಿ ವರ್ತಿಸುತ್ತಿದ್ದ ನಂತೆ.ಕಳೆದ ಒಂದು ವರ್ಷದಿಂದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯವೆಸಗಿದ್ದು ಬೆಳಕಿಗೆ ಬಂದಿದ್ದು
ಓರ್ವ ವಿದ್ಯಾರ್ಥಿನಿ ತಾಯಿಯ ಮುಂದೆ ದೌರ್ಜನ್ಯದ ಬಗ್ಗೆ ಹೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಮೊಹಮ್ಮದ್ ಸಾದಿಕ್ ವಿರುದ್ಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇನ್ನೂ ಬಂಧಿತ ಶಿಕ್ಷಕ ಮೊಹಮ್ಮದ್ ಸಾದಿಕ್ ಮೊಬೈಲ್ನಲ್ಲಿ 300ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಹಾಗೇ ವಿದ್ಯಾರ್ಥಿ ನಿಯರ ಖಾಸಗಿ ಅಂಗಾಂಗಳ ಫೋಟೋಗಳು ಕೂಡ ಪತ್ತೆಯಾಗಿದ್ದು ಶಿಕ್ಷಕ ಮೊಹಮ್ಮದ್ ಸಾದಿಕ್ ಮೊಬೈಲ್ನಲ್ಲಿ 100ಕ್ಕೂ ಹೆಚ್ಚು ಬೇರೆ ಬೇರೆ ಫೋಟೋಗಳು ಪತ್ತೆಯಾಗಿವೆ.ಪ್ರಕರಣ ಸಂಬಂಧ ಪೊಲೀಸರ ತನಿಖೆಯಲ್ಲಿ ಮೇಲ್ನೋ ಟಕ್ಕೆ ದೃಢಪಟ್ಟಿದೆ.
ಶಿಕ್ಷಕ ಮೊಹಮ್ಮದ್ ಸಾದಿಕ್ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿಯವನಾಗಿದ್ದು ಕಳೆದ ಐದು ವರ್ಷದಿಂದ ಚಿಕ್ಕೋಡಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಆರೋಪಿಯ ಮೊಬೈಲ್ ಕೂಡ ಸೀಜ್ ಮಾಡಿದ್ದು ಮೊಬೈಲ್ನಲ್ಲಿನ ಕೆಲ ಫೋಟೊಗಳು ಡಿಲಿಟ್ ಆಗಿದ್ದು ಎಫ್ಎಸ್ಎಲ್ಗೆ ಪೊಲೀಸರು ಕಳುಹಿಸಲು ಮುಂದಾಗಿದ್ದಾರೆ
ಸುಮಾರು ವಿದ್ಯಾರ್ಥಿನಿಯರು ಆತನ ವಿರುದ್ಧ ಹೇಳಿಕೆ ಕೊಟ್ಟಿದ್ದು ಪೋಕ್ಸೊ ಕಾಯ್ದೆಯಡಿ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಚಿಕ್ಕೋಡಿ…..