ಬೆಂಗಳೂರು –
ಹಿರಿಯ ಶಿಕ್ಷಕಿಯೊಬ್ಬರು ಮೃತರಾದ ಘಟನೆ ಚಿತ್ರದುರ್ಗ ಜಿಲ್ಲೆಯ ಸಿರಿಗೇರಿ ಯಲ್ಲಿ ನಡೆದಿದೆ ಸರಕಾರಿ ಪ್ರೌಢ ಶಾಲೆ ಸಿರಿಗೇರಿಯಲ್ಲಿ ಹಿಂದಿ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ನಾಗವೇಣಿ. H. M ಅವರೇ ಮೃತರಾದ ಶಿಕ್ಷಕಿ ಯಾಗಿದ್ದಾರೆ.
ಬೆಳಗಿನಜಾವ ನಿಧನರಾಗಿದ್ದು ಕಳೆದ ಕೆಲ ದಿನ ಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಸದೇ ದೈವಾಧೀನರಾಗಿದ್ದಾರೆ.ಇಲಾಖೆ ಯಲ್ಲಿ ತುಂಬಾ ಆದರ್ಶ ಹಾಗೆ ವಿದ್ಯಾರ್ಥಿಗಳಿಗೆ ಮೆಚ್ಚಿನ ಪ್ರೀತಿಯ ಶಿಕ್ಷಕಿ ಯಾಗಿದ್ದರು.
ಮೃತರಾದ ಇವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ತೀವ್ರವಾದ ಸಂತಾಪವನ್ನು ಸೂಚಿಸಿ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾಥಿಸಿದ್ದಾರೆ.