ಬೆಂಗಳೂರು –
ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ರಾಜ್ಯ ಸರ್ಕಾರ ಹದ್ದಿನ ಕಣ್ಣು ಇಟ್ಟಿದೆ ಹೌದು ಗೃಹ ಇಲಾಖೆ ಜೊತೆ ಸಭೆ ನಡೆಸಿದ ಶಿಕ್ಷಣ ಸಚಿವರು ಗಂಭೀರವಾಗಿ ಪರಿಗಣಿಸಿ ಪರೀಕ್ಷೆ ಯನ್ನು ಯಾವುದೇ ಗೊಂದಲ ಇಲ್ಲದೇ ಚನ್ನಾಗಿ ಮಾಡುವಂತೆ ಆದೇಶವನ್ನು ಮಾಡಲಾಗಿದೆ.ಪಿಎಸ್‌ಐ ಪರೀಕ್ಷೆ ಅಕ್ರಮ ರಾಜ್ಯ ಸರ್ಕಾರದ ಬುಡಕ್ಕೆ ಬಾಂಬ್ ಇಟ್ಟಂತಾಗಿದೆ. ಈ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಬಿಜೆಪಿ ಸರ್ಕಾರವನ್ನ ಪೇಚಿಗೆ ಸಿಲುಕಿಸಿತ್ತು. ಇದರ ನಡುವೆ ಈಗ ಶಿಕ್ಷಕರ ನೇಮ ಕಾತಿ ಪರೀಕ್ಷೆಯೂ ಎದುರಾಗಿದೆ.
ಹೀಗಾಗಿ ಶಿಕ್ಷಣ ಇಲಾಖೆ ಈ ಪರೀಕ್ಷೆಗೆ ಇನ್ನಿಲ್ಲದ ಕಟ್ಟುನಿ ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆ ಅಕ್ರಮದಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ವಿಚಾರದಲ್ಲಿ ಫುಲ್ ಅಲರ್ಟ್ ಆಗಿದೆ. ಮುಂದಿನ ವಾರ ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷೆ ನಡೆಯಲ್ಲಿದ್ದು ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆ ಗೌಪ್ಯತೆಗೆ ತೀರಾ ತಲೆಕೆಡಿಸಿಕೊಂಡಿದೆ. ಜೊತೆಗೆ ಎರಡು ದಿನಗಳ ಕಾಲ ನಡೆಯುವ ಈ ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ತಗೆದುಕೊಳ್ಳಲು ಮುಂದಾಗಿದ್ದು ಕಟ್ಟು ನಿಟ್ಟಿನ ನೀತಿ ಜಾರಿಗೆ ತಂದಿದೆ.
ಇನ್ನು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ವೇಳೆ ಅಕ್ರಮ ತಡೆಯಲು ಶಿಕ್ಷಣ ಇಲಾಖೆ ವಿಶೇಷವಾದ ಕೆಲ ನಿಯಮವನ್ನ ಜಾರಿಗೆ ತಂದಿದೆ. ಮುಖ್ಯವಾಗಿ ಈ ಬಾರಿ ಪರೀಕ್ಷೆಯ ಒಂದು ಕೊಠಡಿಯಲ್ಲಿ 20 ಮಂದಿ ಅಭ್ಯರ್ಥಿ ಗಳನ್ನ ಮಾತ್ರ ಪರೀಕ್ಷೆಗೆ ಕೂರಿಸಲು ತೀರ್ಮಾನಿಸಲಾಗಿದೆ. ಹಾಗೇ ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವ ಡಿಕೆ ಮಾಡಿ ಎಲೆಕ್ಟ್ರಾನಿಕ್ ಉಪಕರಣ ಪತ್ತೆಗೆ ಕ್ರಮ ವಹಿಸ ಲಾಗಿದೆ.ಇನ್ನು ಪ್ರತೀ ಪರೀಕ್ಷಾ ಕೇಂದ್ರಗಳನ್ನ ಪರೀಕ್ಷೆಗೂ ಮೂರು ದಿನ ಮುಂಚಿತವಾಗೇ ವಶಕ್ಕೆ ಪಡೆಯಲಾಗುತ್ತದೆ.
ಹಾಗೇ ಈ ಪರೀಕ್ಷಾ ಮೇಲ್ವಿಚಾರಣೆಗಾಗಿ 3 ಕಮಿಟಿ ರಚಿಸ ಲಾಸಗ್ತಿದ್ದು ಈ ಕಮಿಟಿ ಪರೀಕ್ಷೆ ಮೇಲೆ ಸಂಪೂರ್ಣ ನಿಗಾ ವಹಿಸಲಿದೆ.ಇನ್ನು ಪರೀಕ್ಷೆಗೆ ಮೊಬೈಲ್,ವಾಚ್,ಬ್ಲೂಟೂತ್ ಬಳಕೆಯನ್ನ ಸಂಪೂರ್ಣ ನಿಷೇಧ ಮಾಡಲಾಗಿದ್ದು ಪರೀಕ್ಷೆ ಆರಂಭಕ್ಕೂ ಮುನ್ನ ಪ್ರತೀ ಪರೀಕ್ಷಾ ಕೊಠಡಿಗಳ ತಪಾಸ ಣೆಗೂ ನಿರ್ಧರಿಸಲಾಗಿದೆ.