ಬಾಗಲಕೋಟೆ –
ಶಿಕ್ಷಕರ ನೇಮಕಾತಿ ಹಗರಣದ ವಿಚಾರಣೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಇನ್ನೂ ಈ ಒಂದು ಪ್ರಕರಣ ಸಂಬಂಧಿಸಿದಂತೆ ಬಾಗಲ ಕೋಟೆ ಡಿಡಿಪಿಐ ಶ್ರೀಶೈಲ್ ಅವರನ್ನು ವಶಕ್ಕೆ ಪಡೆದಿರುವ ಸಿಐಡಿ ವಿಚಾರಣೆಯನ್ನು ತೀವ್ರಗೊಳಿಸಿದ್ದು ಇತ್ತ ಟೀಮ್ ನವರು ವಿಚಾರಣೆ ಯನ್ನು ತೀವ್ರಗೊಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಸಿಐಡಿ ವಿಚಾರಣೆ ನಡೆಸಿದ್ದು ಶಿಕ್ಷಕರ ನೇಮಕಾತಿ ಅಕ್ರಮದಲ್ಲಿ ಶ್ರೀಶೈಲ್ ಭಾಗಿಯಾಗಿ ರುವ ಆರೋಪ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗು ತ್ತಿದೆ.
ಶಿಕ್ಷಕರ ಅಕ್ರಮ ನೇಮಕಾತಿ ವಿಚಾರವಾಗಿ 2022ರಲ್ಲಿ ಶ್ರೀಶೈಲ್ ಬಿರಾದಾರ್ ಸೇರಿದಂತೆ ಐವರ ವಿರುದ್ಧ ವಿಧಾನ ಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ದೂರು ದಾಖಲಿಸಿದ್ದರು.