ಬೆಂಗಳೂರು –
ಪ್ರಾಥಮಿಕ ಶಾಲಾ (ಪದವೀಧರ) ಶಿಕ್ಷಕರ 15,000 ಹುದ್ದೆ ಗಳ ನೇಮಕಾತಿಗಾಗಿ ಮೇ 21 ಮತ್ತು 22 ರಂದು ಸ್ಪರ್ಧಾ ತ್ಮಕ ಪರೀಕ್ಷೆ ನಡೆಯಲಿದ್ದು 1.06 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಪಿಎಸ್ಐ ನೇಮಕಕ್ಕೆ ಸಂಬಂಧಿ ಸಿದ ಲಿಖಿತ ಪರೀಕ್ಷೆಯಲ್ಲಿ ನಡೆದ ಪದವಿ ಕಾಲೇಜು ಉಪನ್ಯಾಸಕರ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.ವಿಶೇಷ ಕಣ್ಗಾವಲು ವ್ಯವಸ್ಥೆ ಮಾಡುವ ಮೂಲಕ ಪರೀಕ್ಷೆಯನ್ನು ಪಾರದರ್ಶಕ ವಾಗಿ ನಡೆಸಲು ಸಿದ್ಧತೆ ಮಾಡಿಕೊಂಡಿದೆ.ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿಗದಿತ ದಿನಾಂಕಗಳಂದೇ ಪರೀಕ್ಷೆ ನಡೆಯ ಲಿದೆ.ಯಾವುದೇ ವದಂತಿಗಳಿಗೆ ಅಭ್ಯರ್ಥಿಗಳು ಕಿವಿಗೊಡ ಬಾರದು ಎಂದು ಮನವಿ ಮಾಡಿದರು.
ಈ ಸಲ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.1,06,083 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇವೆ.ಅವರಿಂದಲೂ ಒಂದಷ್ಟು ಮಾಹಿತಿ ಪಡೆದಿದ್ದೇವೆ.ಪರೀಕ್ಷಾ ಕೇಂದ್ರಗಳಲ್ಲಿ ಎರಡು ಹಂತದಲ್ಲಿ ತಪಾಸಣೆ ನಡೆಯಲಿದೆ.ಪೋಲೀಸರು ಮೊದಲ ಹಂತದಲ್ಲಿ ನಂತರ ಶಿಕ್ಷಣ ಇಲಾಖೆಯವರು ತಪಾಸಣೆ ನಡೆಸಲಿದ್ದಾರೆ ಎಂದು ತಿಳಿಸಿದರು.435 ಕೇಂದ್ರ ಗಳಲ್ಲಿ ಪರೀಕ್ಷೆ ನಡೆಯಲಿದೆ.
ಎಲೆಕ್ಟ್ರಾನಿಕ್ ವಸ್ತು ಒಯ್ಯುವಂತಿಲ್ಲ ಹೌದು ಮೊಬೈಲ್ ಸೇರಿ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ.ಅರ್ಧ ಗಂಟೆಗೂ ಮೊದಲೇ ತಪಾಸಣೆ ನಡೆಯಲಿದೆ ಎಂದು ಸಚಿವರು ತಿಳಿಸಿದರು. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವ ಸಂಬಂಧ ಸಿಎಂ ಕೂಡ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ.ಯಾವುದೇ ಕೇಂದ್ರದಲ್ಲಿ ಗೊಂದಲವಾದರೂ ಆಯಾ ಜಿಲ್ಲೆಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು ಚಿಕ್ಕೋಡಿಯಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು ಹೌದು ಚಿಕ್ಕೋಡಿಯಲ್ಲಿ 11,199 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.ಅತಿ ಕಡಿಮೆ ಎಂದರೆ ಚಿಕ್ಕಮಗಳೂರಿನಲ್ಲಿ 490 ಅಭ್ಯರ್ಥಿಗಳು ನೋಂದಾಯಿಸಿ ಕೊಂಡಿದ್ದಾರೆ.