ದಾವಣಗೆರೆ –
ಮಾಡಬಾರದ ಕೆಲಸ ಮಾಡಿದಕ್ಕೆ ಶಿಕ್ಷಕನೊರ್ವ ಅಮಾನತು ಆಗಿರುವ ಘಟನೆ ದಾವಣಗೆರೆ ಜಿಲ್ಲೆ ಯಲ್ಲಿ ನಡೆದಿದೆ.ಹೌದು ಇದಕ್ಕೆ ತಾಜಾ ಉದಾಹರಣೆ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗಳಲ್ಲಿಯೇ ಹೆಚ್ಚು ಆಸಕ್ತಿ ಹೊಂದಿದ್ದ ಜಿಲ್ಲೆಯಲ್ಲಿನ ಶಿಕ್ಷಕ ಆಂಜನೇಯ ನಾಯ್ಕ ಅಮಾನತಾಗಿರುವ ಶಿಕ್ಷಕನಾಗಿದ್ದಾರೆ.ಹೌದು ಶಾಲೆ ಇಲ್ಲದಿದ್ದರೂ ಪ್ರತಿದಿನ ಶಾಲೆಗೆ ಬರುವ ಶಿಕ್ಷಕ, ಬಿಸಿಯೂಟ ಅಡುಗೆ ಸಹಾಯಕಿಯ ಜೊತೆ ಸೆಲ್ಫಿ ತೆಗೆಸಿಕೊಂಡು ಗ್ರೂಪ್ ಗಳಿಗೆ ಪೊಟೊ ಹಾಕುತ್ತಿದ್ದ. ಇದೊಂದೆ ಅಲ್ಲ. ಹತ್ತಾರು ಕಾರಣಕ್ಕೆ ಈತನಿಂದ ಇಡೀ ಗ್ರಾಮಸ್ಥರಿಗೆ ಬೇಸರವಾಗುತ್ತಿತ್ತು. ಮೇಲಾಧಿ ಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಗ್ರಾಮಸ್ಥರು ನೇರವಾಗಿ ಶಿಕ್ಷಣ ಸಚಿವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿ ದ್ದರು.ಹೀಗಾಗಿ ಶಿಕ್ಷಕ ಆಂಜನೇಯ ನಾಯ್ಕ್ ಅವರ ನ್ನು ಅಮಾನತು ಮಾಡಲಾಗಿದೆ.

ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ. ಕೊರೊನಾ ಕಾರಣ ಶಾಲೆಗಳು ಬಂದ್ ಆಗಿವೆ. ಆದರೆ ಈತ ನಿತ್ಯ ಶಾಲೆಗೆ ಬಂದು ಅಡುಗೆ ಸಹಾಯ ಕಿಯರನ್ನು ಕರೆಸುತ್ತಿದ್ದ.ಅಲ್ಲದೇ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಅದನ್ನ ವಿವಿಧ ಗ್ರೂಪ್ ಗಳಿಗೆ ಹಾಕುತ್ತಿದ್ದನಂತೆ.ಅಲ್ಲದೇ ಶಾಲೆಗಳು ತೆರೆದಿದ್ದಾಗ ಈತ ಕುಡಿದು ಬರುತಿದ್ದನಂತೆ ಜೊತೆಗೆ ಮಕ್ಕಳಿಂದ ಗುಟ್ಕಾವನ್ನು ಕೂಡಾ ತರಿಸುತ್ತಿದ್ದನಂತೆ.

ಎರಡು ವರ್ಷದ ಹಿಂದೆ ಓರ್ವ ಮಹಿಳೆ ಈತನ ವಿರುದ್ಧ ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದು ಇನ್ನೂ ಕೂಡಾತನಿಖೆ ನಡೆಯುತ್ತಿದೆ ಗ್ರಾಮಸ್ಥರು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ದೂರು ನೀಡಿದ್ದರು.ಹೀಗೆ ದೂರು ನೀಡಿದ ತಕ್ಷಣವೇ ಸಚಿವರು ಜಾಗೃತರಾಗಿ ದಾವಣಗೆರೆ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಅವರಿಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಿದ್ದರು.ಪರಮೇಶ್ವರಪ್ಪ ನಡೆಸಿದ ತನಿಖೆಯಲ್ಲಿ ಗ್ರಾಮಸ್ಥರು ಮಾಡಿದ ಆರೋಪಗಳು ಸತ್ಯವಾಗಿ ದ್ದವು. ಜೊತೆಗೆ ಗ್ರಾಮದ ಬಹುತೇಕರು ಇತನ ವಿರುದ್ಧ ದೂರು ಹೇಳಿದರು.ಎಲ್ಲ ಸಾಕ್ಷಿಗಳನ್ನು ಆಧಾರಿಸಿ ಶಿಕ್ಷಕ ಆಂಜನೇಯ ನಾಯ್ಕ ಎಂಬಾತ ನನ್ನ ಸೇವೆಯಿಂದ ಅಮಾನತು ಮಾಡಲಾಗಿದೆ.