ಭೀಕರ ಅಪಘಾತ ಶಿಕ್ಷಕಿ ಶಕುಂತಲಾ ಸಾವು – ಶಿಕ್ಷಕಿ ಗೆ ಡಿಕ್ಕಿಯಾದ ಲಾರಿ ಸ್ಥಳದಲ್ಲೇ ಶಿಕ್ಷಕಿ ಸಾವು…..

Suddi Sante Desk
ಭೀಕರ ಅಪಘಾತ ಶಿಕ್ಷಕಿ ಶಕುಂತಲಾ ಸಾವು – ಶಿಕ್ಷಕಿ ಗೆ ಡಿಕ್ಕಿಯಾದ ಲಾರಿ ಸ್ಥಳದಲ್ಲೇ ಶಿಕ್ಷಕಿ ಸಾವು…..

ಸಾಗರ

ಶಿಕ್ಷಕಿಯೊಬ್ಬರಿಗೆ ಲಾರಿ ಯೊಂದು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಸಮೀಪ ನಡೆದಿದೆ.ಸಾಗರ ತಾಲೂಕಿನ ಸಿರವಂತೆಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಕುಂತಲಾ (29),ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ

ಶಿವಮೊಗ್ಗದಲ್ಲಿ ನಡೆಯುತ್ತಿದ್ದ ತರಬೇತಿಗೆ ಹೊರಟಿದ್ದ ಅವರು ಚನ್ನಗಿರಿಯ ಮಾವಿನಕಟ್ಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು.ಈ ವೇಳೆ ಲಾರಿಯೊಂದು ಶಕುಂತಲಾ ಅವರಿಗೆ ಡಿಕ್ಕಿ ಹೊಡೆದಿದೆ.ತಕ್ಷಣ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಶಿಕ್ಷಕಿ ಸಾವನ್ನಪ್ಪಿದ್ದಾರೆ

ಶಕುಂತಲಾ ಅವರು ಸಿರವಂತೆ ಶಾಲೆಯಲ್ಲಿ ಇಂಗ್ಲಿಷ್ ಬೋಧಿಸುತ್ತಿದ್ದರು ಕಳೆದ ವರ್ಷವಷ್ಟೆ ಶಿಕ್ಷಣ ಇಲಾಖೆಗೆ ನೇಮಕಾತಿಗೊಂಡಿದ್ದರು.ಸಧ್ಯ ಈ ಒಂದು ಕುರಿತು ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿ ದ್ದಾರೆ‌

ಸುದ್ದಿ ಸಂತೆ ನ್ಯೂಸ್ ಸಾಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.