ನ್ಯಾಯಕ್ಕಾಗಿ ಪ್ರತಿಭಟನೆ ಗೆ ಕುಳಿತ ‘ಶಿಕ್ಷಕಿ’ – ನ್ಯಾಯ ಸಿಗುವವರೆಗೂ ಹೋರಾಟ ಬಿಡೊದಿಲ್ಲ ಎಂದರು ಶಿಕ್ಷಕಿ ಶಾಂತಾಬಾಯಿ…..

Suddi Sante Desk

ರಾಯಚೂರು –

ನ್ಯಾಯಕ್ಕಾಗಿ ಶಿಕ್ಷಕಿ ಯೊಬ್ಬರು ಪ್ರತಿಭಟನೆ ಮಾಡುತ್ತಿರುವ ಚಿತ್ರಣವೊಂದು ರಾಯಚೂರಿನಲ್ಲಿ ಕಂಡು ಬಂದಿತು.ಪ್ರೀತಿ ಕುರುಡು ಅಂತಾರೆ ನಿಜ.ಆದರೆ ಪ್ರೀತಿಯ ಮಾಯೆಯಲ್ಲಿ ಬಿದ್ದು ಏನನ್ನು ಯೋಚಿಸದೇ ಕಣ್ಣಿದ್ದು ಕುರುಡರಾದರೆ ಏನಾಗಬಹುದು ಎಂಬುದಕ್ಕೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.ಪ್ರೀತಿಸಿ ಮದುವೆಯಾಗಿ ಗಂಡನಿ ಗಾಗಿ ಪ್ರೌಢಶಾಲಾ ಶಿಕ್ಷಕಿಯೊಬ್ಬಳು ಇದೀಗ ಧರಣಿ ಕುಳಿತಿ ದ್ದಾಳೆ.ಗಂಡನಿಲ್ಲದೇ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಗಂಡನಿಗಾಗಿ ಗಂಡನ ಮನೆಯ ಮುಂದೆಯೇ ಶಿಕ್ಷಕಿ ಪ್ರತಿಭಟನೆಗೆ ಕುಳಿತಿದ್ದಾಳೆ.

ಶಿಕ್ಷಕಿ ಶಾಂತಾಬಾಯಿ.ಪ್ರತಾಪ್ ಎಂಬಾತನನ್ನು ಪ್ರೀತಿಸಿ 2017ರ ಅಕ್ಟೋಬರ್ ನಲ್ಲಿ ಮದುವೆಯಾಗಿದ್ದರು.ಆದರೆ ಪ್ರತಾಪ್ ಶಾಂತಾಬಾಯಿಯ ಜತೆ ಮದ್ವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು ಮನೆಯವರ ಒತ್ತಾಯಕ್ಕೆ ಮಣಿದು ಶಾಂತಾಬಾಯಿಗೆ ಕೈಕೊಟ್ಟು 2018ರಲ್ಲಿ ಇನ್ನೊಬ್ಬಳ ಜತೆ ಮದ್ವೆಯಾಗಿದ್ದಾನೆ.ಸಂತ್ರಸ್ತೆ ಶಾಂತಾಬಾ ಯಿಗೆ ಈ ಮೊದಲೇ ಮದ್ವೆಯಾಗಿತ್ತು.ಆದರೆ ಗಂಡನಿಗೆ ಡಿವೋರ್ಸ್ ಕೊಟ್ಟಿದ್ದರು.ಈ ಎಲ್ಲಾ ವಿಷಯವನ್ನು ತಿಳಿದೇ ಶಾಂತಾಬಾಯಿಯನ್ನ ಪ್ರತಾಪ್,ಪ್ರೀತಿಸಿ ಮದ್ವೆಯಾಗಿದ್ದ. ಇದೀಗ ಅಂತರ್ಜಾತಿ ವಿವಾಹ ಕಾರಣ ನೀಡಿ ಶಾಂತಾಬಾ ಯಿಗೆ ಮೋಸ ಮಾಡಿ ಮತ್ತೊಂದು ಮದ್ವೆಯಾಗಿದ್ದಾನೆ.

ಇನ್ನೂ ಪ್ರೀತಿಸಿ ಮದ್ವೆಯಾಗಿ ತಂದೆ-ತಾಯಿಯ ಒತ್ತಾಯಕ್ಕೆ ಮಣಿದು ಇದೀಗ ಪ್ರತಾಪ್ ಮತ್ತೊಂದು ಮದ್ವೆಯಾಗಿದ್ದಾನೆ ಬಾಳು ಕೊಡ್ತೀನಿ ನೀನೇ ಜೀವ ಎಂದು ಇದೀಗ ಶಾಂತಾಬಾ ಯಿಯನ್ನು ಅರ್ಧದಲ್ಲೇ ಕೈ ಬಿಟ್ಟು ಮೋಸ ಮಾಡಿದ್ದಾನೆ. ಇದೀಗ ಮೋಸ ಮಾಡಿರುವ ಪ್ರತಾಪ್ ಹಾಗೂ ಕುಟುಂಬ ಸ್ಥರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಅನ್ಯಾಯಕ್ಕೊಳ ಗಾದ ಶಿಕ್ಷಕಿ ಶಾಂತಾಬಾಯಿಯಿಂದ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.