ರಾಯಚೂರು –
ಸಾಮಾನ್ಯವಾಗಿ ಅದ್ದೂರಿಯಾಗಿ ಕೇಕ್ ಕತ್ತರಿಸಿ ಹಾಗೇ ಹೀಗೆ ಹುಟ್ಟು ಹಬ್ಬವನ್ನು ಆಚರಣೆ ಮಾಡೊದನ್ನು ನೋಡಿದ್ದೇವೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಶಿಕ್ಷಕನೊಬ್ಬ ತನ್ನ ಮಗಳ ಹುಟ್ಟು ಹಬ್ಬವನ್ನು ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ. ಹೌದು ರಾಯಚೂರು ಜಿಲ್ಲೆಯ ಸರಕಾರಿ ದಿಗ್ಗನಾಯಕನಭಾವಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ತಮ್ಮ ಮಗಳ ಹುಟ್ಟು ಹಬ್ಬವನ್ನು ವಿಶಿಷ್ಠವಾದ ರೀತಿಯಲ್ಲಿ ಆಚರಣೆ ಮಾಡಿ ಗಮನ ಸೆಳೆದಿದ್ದಾರೆ.
ಆಚರಣೆ ಮಾಡಿದ್ದಾರೆ. ಹೌದು ರಾಯಚೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹೀಗೆ ತಮ್ಮ ಮಗಳ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಗಮನ ಸೆಳೆದಿದ್ದಾರೆ. ಮಸ್ಕಿ ಶಾಲೆಗೆ ಸುರೇಶ ಶಿಕ್ಷಕರು ಮಸ್ಕಿ ಇವರು ತಮ್ಮ ಮಗಳ ಹುಟ್ಟು ಹಬ್ಬದ ನೆನಪಿಗಾಗಿ 7000 ರೂಗಳನ್ನು ದೇಣಿಗೆ ನೀಡುವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಿ ದರು. ಶಾಲೆಗೆ ಪತ್ನಿ ಮಗಳ ಜೊತೆಗೆ ಆಗಮಿಸಿದ ಅವರು ಶಾಲೆಯ ಅಂದಚಂದ ನೋಡಿ ಖುಷಿ ಪಟ್ಟು ನಮ್ಮ ಭಾಗದಲ್ಲಿಯೇ ಎಲ್ಲಾ ಸೌಲಭ್ಯವನ್ನು ಹೊಂದುತ್ತಿರುವ ಶಾಲೆ ಇದಾಗಿದೆ ನಮ್ಮದು ಸ್ವಲ್ಪ ಕಾಣಿಕೆ ಇರಲಿ ಎಂದು SDMC ಅಧ್ಯಕ್ಷರ ಹಾಗೂ ಮುಖ್ಯ ಗುರುಗಳಿಗೆ ಚೆಕ್ ನೀಡಿದರು. ನಂತರ ಊರಿನ ಪರವಾಗಿ ಹಾಗೂ ಶಾಲೆಯ ಪರವಾಗಿ ದಂಪತಿಗಳಿಗೆ ಧನ್ಯವಾದಗ ಳನ್ನು ಹೇಳಿದ್ದಾರೆ.