ಚಿಕ್ಕಮಗಳೂರ –
ಶಾಲೆಗೆ ಸತತವಾಗಿ ಗೈರು ಆದ ಹಿನ್ನಲೆಯಲ್ಲಿ ಸೇವೆಯಿಂದ ಶಿಕ್ಷಕರೊಬ್ಬರನ್ನು ಸೇವೆಯಿಂದ ಅಮಾನತು ಮಾಡಿರುವ ಘಟನೆ ಚಿಕ್ಕಮಗಳೂರಿ ನಲ್ಲಿ ನಡೆದಿದೆ.ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂ ಕಿನ ಬಿಕ್ಕರಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎನ್ ತಿಪ್ಪೇಸ್ವಾವಿ ಅವರನ್ನೇ ಕರ್ತವ್ಯ ಲೋಪದ ಆರೋಪದ ಮೇಲೆ ಸೇವೆ ಯಿಂದ ಅಮಾನತು ಮಾಡಲಾಗಿದೆ. ಹೌದು ಎನ್ ತಿಪ್ಪೇಸ್ವಾಮಿ ಅಮಾನತುಗೊಂಡಿರುವ ಶಿಕ್ಷಕರಾಗಿ ದ್ದಾರೆ.2012 ರ ಸಪ್ಟಂಬರ್ 23 ರಿಂದ 2021 ರ ಜುಲೈ 1ರ ವರೆಗೆ ಸೇವೆಗೆ ಅನಧಿಕೃತವಾಗಿ ಗೈರು ಆದ ಹಿನ್ನಲೆಯಲ್ಲಿ ಈ ಒಂದು ಆದೇಶವನ್ನು ಮಾಡಲಾಗಿದೆ.
ಸತತವಾಗಿ ಗೈರು ಆದ ಹಿನ್ನಲೆಯಲ್ಲಿ ಇವರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಹೇಳಿದರು ಕೂಡಾ ಆಗದ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿಯನ್ನು ಆಧರಿಸಿ ಸೇವೆಯಿಂದ ಇವರನ್ನು ಅಮಾನತು ಮಾಡಲಾಗಿದೆ.ಚಿಕ್ಕಮಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಈ ಒಂದು ಆದೇಶವನ್ನು ಮಾಡಿದ್ದಾರೆ.ಶಿಸ್ತು ಪ್ರಾಧಿಕಾ ರಗಳು ಕರ್ನಾಟಕ ನಾಗರೀಕ ಸೇವಾ ನಿಯಮಾವ ಳಿಗಳ ಪ್ರದತ್ತವಾದ ಅಧಿಕಾರದನ್ವಯ ಕರ್ನಾಟಕ ನಾಗರಿಕ ಸೇವಾ ನಿಮಯ 108 ರ ಅನ್ವಯ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.