ಶಿಕ್ಷಕ ಅಮಾನತು ಮಾಜಿ ಶಿಕ್ಷಣ ಸಚಿವರಿಂದ ಶಬ್ಬಾಷ್ ಗಿರಿ ಪಡೆದು ಕೊಂಡಿದ್ದ ಫಣೀಂದ್ರ ಅಮಾನತು ಮಾಡಿದ DDPI…..

Suddi Sante Desk

ತುಮಕೂರು –

ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಂದ ಶಿಕ್ಷಕನಾಗಿದ್ದುಕೊಂಡು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡು ಶಬ್ಬಾಷ್ ಗಿರಿ ಪಡೆದಿದ್ದ ಶಿಕ್ಷಕ ರೊಬ್ಬರು ಅಮಾನತು ಆಗಿದ್ದಾರೆ.ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗೊಂಬೆಹಳ್ಳಿ ಸರ್ಕಾರಿ ಶಾಲೆಯ ಫಣೀಂದ್ರ ಮದ್ಯ ಸೇವಿಸಿ ಬಂದು ದುರ್ವರ್ತನೆ ಹಿನ್ನೆಲೆಯಲ್ಲಿ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ.

ಶಾಲೆಗೆ ಮದ್ಯ ಸೇವಿಸಿ ಬಂದಿರುವುದು ಅವಾಚ್ಯ ಶಬ್ದ ಗಳಿಂದ ಸಹೋದ್ಯೋಗಿಗಳ ನಿಂದನೆ ಮುಂತಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷಕ ರನ್ನು ಸಧ್ಯ ಅಮಾನತು ಮಾಡಿದ್ದಾರೆ.

ಸಚಿವರ ಶಬ್ಬಾಸ್ ಗಿರಿ ದೊರೆತ ಬಳಿಕ ವರ್ತನೆ ಬದಲಾಯಿ ಸಿಕೊಂಡಿದ್ದ ಫಣೀಂದ್ರ ಅನೇಕ ಕಾರಣಗಳನ್ನು ನೀಡಿ ಶಾಲೆಗೆ ಗೈರು ಹಾರ ಹಾಜರಾಗುತ್ತಿದ್ದರು.ಅಲ್ಲದೇ ನಿತ್ಯ ಮದ್ಯ ಸೇವಿಸಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಶಾಲೆಯ ಅನೇಕ ಶಿಕ್ಷಕರಿಗೆ ಚಪ್ಪಲಿ ತೋರಿಸಿ ಬೆದರಿಕೆ ಹಾಕುತ್ತಿದ್ದರಂತೆ ವಿದ್ಯಾರ್ಥಿಗಳೊಂದಿಗೆ ಅನುಚಿತನೆ ವರ್ತನೆ.ಮುಖ್ಯ ಶಿಕ್ಷಕರಿಗೆ ಜಾತಿ ನಿಂದನೆ ಮಾಡಿ ಏಕವಚ ನದಲ್ಲಿ ಬೈದು ಅನುಚಿತ ವರ್ತನೆ ತೋರಿದ್ದು ಆಂತರಿಕ ತನಿಖೆ ವೇಳೆ ಸಾಬೀತಾಗಿದೆ.

ಅಲ್ಲದೆ ಗೊಂದಿಹಳ್ಳಿ ಶಾಲೆಯ ಪೋಷಕರು ಸಹ ಶಿಕ್ಷಕನ ವಿರುದ್ಧ ಬಿಇಒಗೆ ದೂರು ನೀಡಲಾಗಿತ್ತು ಗ್ರಾಮಸ್ಥರ ದೂರನ್ನು ಪರೀಶಿಲನೆ ನಡೆಸಿದ ಶಿಕ್ಷಣ ಇಲಾಖೆ ಅಧಿಕಾರಿ ಗಳು.ತನಿಖೆಯಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆ ಯಲ್ಲಿ ಮಧುಗಿರಿ ಡಿ.ಡಿ.ಪಿ.ಐ ರೇವಣ್ಣ ಸಿದ್ದಪ್ಪರಿಂದ ಅಮಾನತು ಆದೇಶ ಹೊರಡಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.