ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರ ಚಿಕ್ಕದಾದರು ಇದೊಂದು ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಆಗುತ್ತಿದೆ ಮನಸ್ಸು ಮಾಡಿದರೆ ಇದೇನು ದೊಡ್ಡ ಸಮಸ್ಯೆ ಏನಲ್ಲ ಆದರೂ ಕೂಡಾ ಇದನ್ನು ದೊಡ್ಡ ಸಮಸ್ಯೆ ಯನ್ನಾಗಿ ನಮ್ಮ ರಾಜ್ಯ ಸರ್ಕಾರ ಶಿಕ್ಷಣ ಸಚಿವರು ತಗೆದುಕೊಂಡು ಮಾಡಿಟ್ಟಿದ್ದಾರೆ.ಯಾವ ಇಲಾಖೆಗೂ ಇಲ್ಲದ ವರ್ಗಾವಣೆಯ ನೀತಿ ಶಿಕ್ಷಕರಿಗೆ ಇದೆ ಹೀಗಾಗಿ ಅವೈಜ್ಞಾನಿಕ ವರ್ಗಾವಣೆಯ ನೀತಿ ಯಿಂದಾಗಿ ನಾಡಿನ ಶಿಕ್ಷಕರು ವರ್ಗಾವಣೆ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ.

ಇದು ಒಂದೆಡೆಯಾದರೆ ಇನ್ನೂ ಪ್ರಮುಖವಾಗಿ ಈ ಒಂದು ಅವೈಜ್ಞಾನಿಕ ವರ್ಗಾವಣೆ ನೀತಿಯಿಂದಾಗಿ ನಾಡಿನ ಶಿಕ್ಷಕರೊಬ್ಬರು ಅನುಭವಿಸಿದ ನೋವು ಮತ್ತು ಸರ್ಕಾರಕ್ಕೆ ಕೆಲವೊಂದಿಷ್ಟು ಸಲಹೆ ಗಳನ್ನು ನೀಡಿದ್ದಾರೆ
ಸುಧಾರಣೆಗೆ ನನ್ನ ಸಲಹೆಗಳು
✍️ಶ್ರೀ ಮಾಲತೇಶ್ ಬಬ್ಬಜ್ಜಿ
ಹರಿಯಾಣ ಸರ್ಕಾರದ್ದು ನಿಜಕ್ಕೂ ಮಾದರಿ….
2 ತಿಂಗಳಲ್ಲಿ ಶಿಕ್ಷಕರ ವರ್ಗಾವಣೆ ಆನ್ ಲೈನ್ ಪ್ರಕ್ರಿಯೆ ಮುಗಿಯಲಿದೆ…?
ನಮ್ಮ ರಾಜ್ಯವೂ ಯಾವ ರಾಜ್ಯಕ್ಕಿಂತಲೂ ಕಮ್ಮಿ ಇಲ್ಲ ಹಲವಾರು ಸುಧಾರಣೆಗಳಿಗೆ ದೇಶದಲ್ಲಿ ಮಾದರಿಯಾದ ರಾಜ್ಯ ನಮ್ಮ ಕರ್ನಾಟಕ.
ಯಾಕೋ ಏನೋ ಶಿಕ್ಷಕರ ವರ್ಗಾವಣೆ ಕಾಯ್ದೆ ಜಾರಿಯಾದ ಬಳಿಕ ಒಮ್ಮೆಯೂ ಸುಸೂತ್ರವಾಗಿ ನಡೆದಿಲ್ಲ.ಅಂದರೆ ನಿಯಮಿತವಾಗಿ ನಡೆಯುತ್ತಿಲ್ಲ.ಪ್ರತಿ ವರ್ಷ ಏಪ್ರಿಲ್ ಮೇ ನಲ್ಲೇ ವರ್ಗಾವಣೆ ಪ್ರಕ್ರಿಯೆಯನ್ನು ಮುಗಿಸುತ್ತೇವೆ ಎಂದು ಕಾಯ್ದೆ ರೂಪಿಸಿದ್ದ ಸರ್ಕಾರವೇ ಏಪ್ರಿಲ್ ಮೇ ನಲ್ಲಿ ವರ್ಗಾವಣೆ ಮುಗಿಸುತ್ತಿಲ್ಲ.
ಒಂದು ಆಶ್ಚರ್ಯಕರ ಸುದ್ದಿ
ಉದಾಹರಣೆಗೆ ನಾನೇ ಒಂದೇ ಶಾಲೆಯಲ್ಲಿ 13 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ ಪ್ರತಿ ವರ್ಷವೂ ವರ್ಗಾವಣೆಗೆ ಅರ್ಜಿ ಹಾಕಿ ಸುಮ್ಮನೆ ಕೂರುವುದೇ ಆಗಿದೆ.
ವರ್ಗಾವಣೆ ಸಿಗುತ್ತಿಲ್ಲ….
ನನ್ನಂತೆ 15,20 ವರ್ಷ ಸೇವೆ ಸಲ್ಲಿಸಿದ್ದವರೂ ಸಾವಿರಾರು ಜನ ಇದ್ದಾರೆ.
ಕಾರಣ
1)ಪ್ರತಿ ವರ್ಷ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿಲ್ಲ.
2)25% ಖಾಲಿ ಹುದ್ದೆ ಅವೈಜ್ಞಾನಿಕ ನಿಯಮ
3)ಶಿಕ್ಷಕರ ನೇಮಕಾತಿ ಇಲ್ಲ
ಕೇಳೋಕೆ ಚಂದ
“ಶಿಕ್ಷಕರ ಸ್ನೇಹಿ ವರ್ಗಾವಣೆ”
ಶಿಕ್ಷಕರ ವರ್ಗಾವಣೆ ಕಾಯ್ದೆಯನ್ನೇ ರದ್ದು ಮಾಡಬೇಕು ಆಗ ಒಳ್ಳೆಯದಾಗಬಹುದೇನೋ
ಹಾಗೆಯೇ ಕಳೆದ 2 ವರ್ಷದ ಬಳಿಕ ವರ್ಗಾವಣೆ ಆರಂಭಿಸಿದರೂ ಹಲವಾರು ಕಾರಣಕ್ಕೆ ಶಿಕ್ಷಕರು ವರ್ಗಾವಣೆ ಹೊಂದಲು ಸಾಧ್ಯವಾಗುತ್ತಿಲ್ಲ.25% ನಿಯಮ ಅಂತ ಮಾಡಿ ಶಿಕ್ಷಕರನ್ನು ಒಂದೇ ಸ್ಥಳದಲ್ಲಿ 10, 15 ,20 ವರ್ಷದಿಂದ ಕೊಳೆಯುವಂತೆ ಆಗಿದೆ 25% ರದ್ದಾಗಬೇಕು
ಹಾಗೆಯೇ ವರ್ಷಕ್ಕೊಮ್ಮೆ ವರ್ಗಾವಣೆ ಗೆ ಪ್ರತಿ ಶತ % WITHIN DIST 5%
WITHINI DIVISION 2% OUT OF UNIT 2 %
ಅಂತ ನಿಗದಿ ಮಾಡಿ ವರ್ಗಾವಣೆ ಎಷ್ಟು ವರ್ಷ ತಡವಾಗಿ ಆರಂಭಿಸಿತ್ತಾರೋ ಅಷ್ಟು % Add ಮಾಡಬೇಕು…
1 year 9%
2 year 18%
3 year 27%
ಆಗಬೇಕು….
ಇದು ಯಾವ ನ್ಯಾಯ 2 ವರ್ಷ ಬಿಟ್ಟು ವರ್ಗಾವಣೆ ಮಾಡಿದರೂ 9% ಅಷ್ಟೇ ಅಂದರೆ ಯಾವ ನ್ಯಾಯ⁉️
ದಯವಿಟ್ಟು ಈ ನಿಟ್ಟಿನಲ್ಲಿ ಮತ್ತೊಮ್ಮೆ ಆಲೋಚಿಸಿ ಹಲವಾರು ದಿಟ್ಟ ಸುಧಾರಣೆಯಾಗಬೇಕಿದೆ. ವೇಳಾಪಟ್ಟಿಯನ್ನು ಮಾರ್ಪಡಿಸಿ 2 ತಿಂಗಳಿಗೆ ವರ್ಗಾವಣೆಯನ್ನು ಪೂರ್ಣಗೊಳಿಸಿದರೆ ಸಾವಿರಾರು ಶಿಕ್ಷಕರಿಗೆ ಅನುಕೂಲವಾಗುತ್ತದೆ..
ಇಂತಿ
✍️ ಶ್ರೀ ಮಾಲತೇಶ್ ಬಬ್ಬಜ್ಜಿ
ಶಿಕ್ಷಕರು