ಬೆಂಗಳೂರು –
ಅಕ್ಟೋಬರ್ ತಿಂಗಳಲ್ಲಿ 28 ದಿನಗಳು ಹಾಗೂ ಏಪ್ರಿಲ್ ತಿಂಗಳಲ್ಲಿ 40 ದಿನಗಳ ರಜೆ ಪಡೆಯುವಾಗ ನಿರ್ಧಾರವಾದ ಹತ್ತು ಗಳಿಕೆ ರಜೆಗಳ ಸೌಲಭ್ಯ ಈಗಲೂ ಮುಂದುವರೆದಿದೆ. ಪ್ರತಿ ವರ್ಷವೂ ರಜಾವಧಿಯ ದಿನಗಳಲ್ಲಿ ಕಡಿತವಾಗು
ತ್ತಲೇ
ಇದೆ.ಶಿಕ್ಷಕರು ರಜಾವಧಿಯ ದಿನಗಳಲ್ಲಿ ಸಾಕಷ್ಟು ಕೆಲಸಗಳನ್ನು ನಿರ್ವಹಿಸುತ್ತಿದ್ದರೂ, ಕೇವಲ ಹತ್ತೇ ಗಳಿಕೆ ರಜೆಗಳು ಮುಂದುವರೆದಿವೆ.
. ಹತ್ತು ಗಳಿಕೆ ರಜೆಗಳ ನಿಯಮ ಪರಿಷ್ಕೃತವಾಗಿ ಕನಿಷ್ಠ 20 ಕ್ಕಾದರೂ ಹೆಚ್ಚಿಸಲೇ ಬೇಕು.ಇತರೆ ಇಲಾಖೆಗಳ ನೌಕರರು 30 ದಿನಗಳ ಗಳಿಕೆ ರಜೆ 20 ದಿನಗಳ ಅರ್ಧ ವೇತನ ರಜೆ, ಪ್ರತಿ ತಿಂಗಳೂ ಎರಡನೇ ಹಾಗೂ ನಾಲ್ಕನೇ ಶನಿವಾರ ರಜೆ ಪಡೆಯುತ್ತಿ ದ್ದಾರೆ.ಶಿಕ್ಷಕರಿಗೆ ಕೇವಲ 10 ಗಳಿಕೆ ರಜೆಗಳ ಸೌಲಭ್ಯ ಮಾತ್ರ ಇದೆ. ಅರ್ಧ ವೇತನ ರಜಾ ಸೌಕರ್ಯ ಇಲ್ಲವೇ ಇಲ್ಲ

ಗಳಿಕೆಯ ರಜೆಗಳನ್ನು ನಿರ್ಧರಿಸಿದ ಹಳೆಯ ಕೆ.ಸಿ. ಎಸ್ ಆರ್ ನಿಯಮಗಳನ್ನು ಪರಿಷ್ಕೃತಗೊಳಿಸಬೇಕು ರಜಾ ಸಹಿತ ಇಲಾಖೆ ಎಂಬ ಹಣೆ ಪಟ್ಟಿ ಹಚ್ಚಿಕೊಂಡು ಶಿಕ್ಷಕರು ರಜಾ ದಿನಗಳಲ್ಲಿ ಎಸ್.ಟಿ.ಎಸ್ ಗಣಕೀಕರಣ,ಮಕ್ಕಳಿಗೆ ಆಹಾರ ಧಾನ್ಯಗಳ ವಿತರಣೆ ಶಾಲಾ ಸ್ವಚ್ಛತೆ,ಪೂರ್ವ ಸಿದ್ಧತಾ ಕಾರ್ಯಗಳು,ಪಠ್ಯ ಪುಸ್ತಕ,ಸಮವಸ್ತ್ರ ಪಡೆದು ಕೊಳ್ಳುವದು,ವಿತರಣೆ,ಕಚೇರಿಯ,ಎಸ್ ಡಿ ಎಂ ಸಿ .ಸಭೆಗಳು/ತರಬೇತಿಗಳು, ಚುನಾವಣೆ,ಮತದಾರರ ಪಟ್ಟಿ ಪರಿಷ್ಕರಣ ರೀತಿಯ ಕಾರ್ಯಗಳು,ಹಲವು ರೀತಿಯ ಗಣತಿ ಕಾರ್ಯಗಳು,ದಾಖಲಾತಿ ಆಂದೋಲನ,ಕೋವಿಡ್ ಕಾರ್ಯಗಳಿಗೆ ನಿಯೋಜನೆ,ಗಣ್ಯರ ಅನೇಕ ಕಡ್ಡಾಯ ದಿನಾಚರಣೆಗಳಿಗೆ ಹಾಜರಾಗುವದು ಹೀಗೆ ರಜಾವಧಿಯ ಲ್ಲಿಯೂ ಹಲವಾರು ಕಾರ್ಯ ನಿರ್ವಹಣೆ ಮಾಡುತ್ತಲೇ ಇದ್ದಾರೆ.ಆರ್ ಟಿ. ಇ ಪ್ರಕಾರ ಈಗ ಕನಿಷ್ಠ ಕಲಿಕಾ ದಿನಗ ಳನ್ನು ಹೆಚ್ಚಿಸಲು ರಜೆಗಳ ಕಡಿತ ಮಾಡಲಾಗಿದೆ.ಗಳಿಕೆಯ ರಜೆಗಳನ್ನು ನಿರ್ಧರಿಸಿದ ಕೆ.ಸಿ.ಎಸ್ ಆರ್ ನಿಯಮಗಳನ್ನು ಪರಿಷ್ಕೃತಗೊಳಿಸಬೇಕು.