ಕುಮಟಾ –
ವಿದ್ಯಾರ್ಥಿಗಳಿಲ್ಲದೆ ಬಾಗಿಲು ಮುಚ್ಚಿಕೊಂಡಿದ್ದ ಸರ್ಕಾರಿ ಶಾಲೆಯೊಂದು ಮೂರು ವರ್ಷಗಳ ನಂತರ ಮತ್ತೆ ಈಗ ಬಾಗಿಲು ತೆರೆದುಕೊಂಡಿದೆ.ಹೌದು ಹೌದು ಮೂರು ವರ್ಷಗಳ ಹಿಂದೆ ವಿದ್ಯಾರ್ಥಿಗಳಿ ಲ್ಲದೆ ಮುಚ್ಚಿದ್ದ ತಾಲ್ಲೂಕಿನ ಬೊಗರಿಬೈಲ ಕಿರಿಯ ಪ್ರಾಥಮಿಕ ಶಾಲೆ ಗ್ರಾಮಸ್ಥರು ನಡೆಸಿದ ಪ್ರಯತ್ನ ದಿಂದಾಗಿ ಈ ವರ್ಷ ಪುನರಾರಂಭಗೊಂಡಿದೆ.
ಬೊಗರಿಬೈಲ, ಕಲ್ಲಬ್ಬೆ ಗ್ರಾಮ ಪಂಚಾಯ್ತಿಗೆ ಸೇರುವ 45 ಮನೆಗಳಿರುವ ಪುಟ್ಟ ಊರು.ಕಳೆದ 60 ವರ್ಷ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ ನಾಯ್ಕ ಮಾಹಿತಿ ನೀಡಿ ವಿದ್ಯಾರ್ಥಿಗಳಿಲ್ಲದೆ ಊರ ಶಾಲೆ ಮುಚ್ಚಿದಾಗ ಎಲ್ಲರಿಗೂ ನೋವಾಗಿತ್ತು. ಊರಿ ನ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವಂತೆ ಪೋಷ ಕರ ಮನವೊಲಿಸಿದಾಗ ಅವರು ಸಹಕಾರ ನೀಡಿದ ರು.ಊರಿನಲ್ಲಿ ಶಾಲೆ ನಡೆಯುತ್ತಿತ್ತು. ಈಗ ಊರಿನ ಮೂವರು ಮಕ್ಕಳು ಶಾಲೆಗೆ ಪ್ರವೇಶ ಪಡೆಯಲು ಮುಂದೆ ಬಂದಿರುವುದರಿಂದ ಶಾಲೆ ಪುನರಾರಂಭ ಗೊಂಡಿದಂತಾಗಿದೆ.
ಶಿಕ್ಷಕ ಪಿ.ಟಿ. ನಾಯ್ಕ ಶಾಲೆ ಮತ್ತೆ ಅರಂಭವಾಗುವು ದಕ್ಕೆ ಸ್ಥಳೀಯ ಗ್ರಾಮಸ್ಥರ ಪ್ರಯತ್ನ ಕಾರಣ. ಯುವಕರು ಸ್ವಯಂ ಪ್ರೇರಣೆಯಿಂದ ಶಾಲಾ ಆವರಣ ಶುಚಿಗೊಳಿಸಿ ಕಾಂಪೌಂಡ್ ನಾಮಫಲಕ, ಧ್ವಜ ಕಟ್ಟೆಗೆ ಬಣ್ಣ ಬಳಿದು ಸುಂದರಗೊಳಿಸಿದ್ದಾರೆ. ಶಾಲೆಯ ಹೆಸರಿಗೆ ಎಂಟು ಗುಂಟೆ ಜಾಗವಿದ್ದು ಬಿಸಿ ಯೂಟ ಕೋಣೆ, ಶೌಚಾಲಯ, ಕುಡಿಯುವ ನೀರಿನ ಬಾವಿ ಸೌಲಭ್ಯವಿದೆ ಎಂದರು.