ಹುಬ್ಬಳ್ಳಿ –
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ನಿರಂತರ ಪ್ರಯತ್ನದ ಫಲವಾಗಿ ಬುಧವಾರ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕ್ಷಕರನ್ನು ಕರೋನಾ ವಾರಿಯರ್ಸ್ ಹಾಗೂ ಫ್ರಂಟ್ ಲೈನ್ ವರ್ಕರ್ಸ್ ಎಂದು ಘೋಷಿಸಿ ದ್ದಾರೆ.ಇದನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂ ಗನಗೌಡ ಪಾಟೀಲ ಹಾಗೂ ರಾಜ್ಯ ಘಟಕದ ಪ್ರಧಾ ನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಸ್ವಾಗತಿಸಿದರು

ಅದಕ್ಕಾಗಿ ಸಹಕರಿಸಿದ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಈ ಬಗ್ಗೆ ಶಿಕ್ಷಕರ ಸಂಘದ ಈ ನೈಜ ಬೇಡಿಕೆ ಯನ್ನು ವಿವರವಾಗಿ ಪ್ರಕಟಿಸಿದ ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕೋವಿಡ್ ಕಾರ್ಯದಲ್ಲಿ ಕಳೆದ ವರ್ಷದಿಂದ ಮೃತ ಪಟ್ಟ ಎಲ್ಲಾ ಶಿಕ್ಷಕ ಕುಟುಂಬದವರಿಗೆ ಪರಿಹಾರ ಹಣ ನೀಡಬೇಕು ಜೊತೆಗೆ ಕೋವಿಡ್ ನಿಂದ ಗುಣಮುಖ ರಾದ ಶಿಕ್ಷಕರ ಆಸ್ಪತ್ರೆಯ ಬಿಲ್ ನ್ನು ತಕ್ಷಣ ಮಂಜೂ ರಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ಸಹಸ್ರಾರು ಶಿಕ್ಷಕರು ಕೋವಿಡ್ ಕಾರ್ಯ ನಿರ್ವಹಿಸುತ್ತಿದ್ದು ಅವರಿಗೆಲ್ಲರಿಗೂ ಕೋವಿ ಡ್ ಸುರಕ್ಷತಾ ಪರಿಕರಗಳನ್ನು ನೀಡಬೇಕು ಹಾಗೂ ಕೋವಿಡ್ ಕಾರ್ಯದಲ್ಲಿ ತೊಡಗಿದ ಶಿಕ್ಷಕರಿಗೆ ಸೋಂಕು ತಗುಲಿದವರಿಗಾಗಿಯೇ ಆಸ್ಪತ್ರೆಯಲ್ಲಿ ಬೆಡ್ ಮೀಸಲಿಡಬೇಕು ಅವರಿಗೆ ತ್ವರಿತಗತಿಯಲ್ಲಿ ಉಚಿತ ಚಿಕಿತ್ಸೆ ಲಭಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಚಂದ್ರಶೇಖರ ನುಗ್ಗಲಿ ಮನವಿ ಮಾಡಿದ್ದಾರೆ.

ಶಿಕ್ಷಕರಿಗೂ ಆದ್ಯತೆಯ ಮೇರೆಗೆ ಲಸಿಕೆ ಪಡೆಯಲು ರಾಜ್ಯ ಸರ್ಕಾರ ಸೂಚಿಸಿದ್ದು ಎಲ್ಲಾ ಶಿಕ್ಷಕರು ಲಸಿಕೆ ಹಾಕಿಕೊಳ್ಳಬೇಕು ಎಂದು ಶಿಕ್ಷಕರಲ್ಲಿ ಅವರು ಮನವಿ ಮಾಡಿದ್ದಾರೆ.