ಶಿಕ್ಷಣ ಸಚಿವರನ್ನು ಭೇಟಿಯಾದ ಶಿಕ್ಷಕರ ಸಂಘದವರು – ಶಿಕ್ಷಕರ ಪರವಾಗಿ ಸಚಿವರನ್ನು ಅಭಿನಂದಿಸಿ ಸನ್ಮಾನಿಸಿ ಸ್ವಾಗತಿಸಿದರು ಸರ್ವ ಸದಸ್ಯರು…..

Suddi Sante Desk

ಯಾದಗಿರಿ –

ನೂತನ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರನ್ನು ಯಾದಗಿರಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸ್ವಾಗತ ಮಾಡಲಾಯಿತು.ನಗರಕ್ಕೆ ಆಗಮಿಸಿದ ನೂತನ ಸಚಿವರನ್ನು ಸಂಘದ ಪರವಾಗಿ ಸ್ವಾಗತಿಸ ಲಾಯಿತು.

ಇದೇ ವೇಳೆ ನೂತನ ಸಚಿವರನ್ನು ಸಂಘಧ ಸರ್ವ ಸದಸ್ಯರು ಭೇಟಿಯಾಗಿ ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಮಾತುಕತೆ ಮಾಡಿದರು.ಅದರಲ್ಲೂ ಪ್ರಮುಖವಾಗಿ ಶಿಕ್ಷಕರ ವರ್ಗಾವಣೆ,ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆಯನ್ನು ಮಾಡಲಾಯಿತು ಹಾಗೇ ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘ(ರಿ)ಬೆಂಗಳೂರ ಜಿಲ್ಲಾ ಘಟಕ ಯಾದಗಿರಿ ವತಿಯಿಂದ ಶಿಕ್ಷಣ ಸಚಿವರನ್ನು ಸನ್ಮಾನಿಸಿ ಪ್ರೀತಿಯಿಂದ ಗೌರವಿಸಲಾಯಿತು.

ಈ ಒಂದು ಸಮಯದಲ್ಲಿ ಜಿಲ್ಲಾ ಅಧ್ಯಕ್ಷರಾದ ರಾಘವೇಂದ್ರ ಅಳ್ಳಳ್ಳಿ,ಜಿಲ್ಲಾ ಕಾಯ೯ದಶಿ೯ಗಳಾದ ಜಗದೀಶ ಗೋಟ್ಲಾ,ಜಿಲ್ಲಾಸಹಕಾಯ೯ದಶಿ೯ಗಳಾದ ಮೂತಿ೯ ಜಿ ಹಾಗೂ ಸಂಘಟನಾ ಕಾಯ೯ದಶಿ೯ ಗಳಾದ ಮನೋಹರ ಕಟ್ಟಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇದೇ ವೇಳೆ ಶಿಕ್ಷಕರ ವರ್ಗಾವಣೆ ವಿಚಾರ ಹಾಗೇ ಶಿಕ್ಷಕರ ಸಮಸ್ಯೆಗಳ ಕುರಿತಂತೆ ನೂತನ ಶಿಕ್ಷಣ ಸಚಿವರ ಗಮನಕ್ಕೆ ತರಲಾಯಿತು.

ಬರುವ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಎಲ್ಲವುಗಳನ್ನು ಪರಿಹರಸುವ ಭರವಸೆಯನ್ನು ಮಾನ್ಯ ಶಿಕ್ಷಣ ಸಚಿವರು ಸಂಘದ ಸರ್ವ ಸದಸ್ಯರಿಗೆ ಭರವಸೆಯನ್ನು ನೀಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.