ಬೆಂಗಳೂರು ಚಲೋ ಗೆ ಕರೆ ನೀಡಿದರು ಶಿಕ್ಷಕರು ಇಂದು ರಾಯಚೂರಿನಲ್ಲಿ ನಡೆಯಲಿದೆ ವರ್ಗಾವಣೆ ವಂಚಿತರಾದ ಶಿಕ್ಷಕರ ಸಭೆ ಬನ್ನಿ ಪಾಲ್ಗೊಂಡು ಶಕ್ತಿ ತುಂಬಿ

Suddi Sante Desk

ರಾಯಚೂರು –

ವರ್ಗಾವಣೆ ವಂಚಿತರಾದ ಶಿಕ್ಷಕರ ಸಭೆ ಇಂದು ರಾಯಚೂ ರಿನಲ್ಲಿ ನಡೆಯಲಿದೆ.ಹೌದು ಈಗಾಗಲೇ ನಮಗೂ ಕೂಡಾ ನಾವು ಅಂದುಕೊಂಡ ಹಾಗೇ ವರ್ಗಾವಣೆ ಆಗುತ್ತದೆ ನಾವು ಕೂಡಾ ವರ್ಗಾವಣೆ ಗೊಂಡು ಸ್ವಂತ ಜಿಲ್ಲೆಗೆ ಹೋಗುತ್ತವೆ ಎಂದುಕೊಂಡು ಕಾದು ಕಾದು ಬೇಸತ್ತ ವರ್ಗಾವಣೆ ವಂಚಿತ ಶಿಕ್ಷಕರು ಈಗ ಬೆಂಗಳೂರು ಚಲೋ ಗೆ ಕರೆ ನೀಡಿದ್ದಾರೆ.

ವರ್ಗಾವಣೆ ವಂಚಿತ ಶಿಕ್ಷಕರೇ ಎಚ್ಚೇತ್ತುಕೊಳ್ಳಿ ರವಿವಾರ ರಾಯಚೂರಿನಲ್ಲಿ ನಡೆಯುವ ಪೂರ್ವಭಾವಿ ಬೆಂಗಳೂರು ಚಲೋ ಸಭೆಗೆ ಪಾಲ್ಗೊಳ್ಳಿ ಎಂದು ಕರೆ ನೀಡಲಾಗಿದೆ ಹೌದು ಇಂದು ರಾಯಚೂರಿನ ಪಬ್ಲಿಕ್ ಗಾರ್ಡನ್ ನಲ್ಲಿ ಈ ಒಂದು ಸಭೆ ನಡೆಯಲಿದ್ದು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ.

ಅಂತೂ ಈವರೆಗೆ ಸಮಸ್ಯೆ ಪರಿಹಾರಕ್ಕೆ ಶಿಕ್ಷಕರ ಸಂಘಟನೆ ಯ ನಾಯಕರನ್ನು ನಂಬಿಕೊಂಡು ಕಾದು ಕಾದು ಬೇಸತ್ತ ವರ್ಗಾವಣೆಯ ವಂಚಿತ ಶಿಕ್ಷಕರು ಈಗ ಬೆಂಗಳೂರು ಚಲೋ ಗೆ ಕರೆ ಕೊಟ್ಟಿದ್ದು ಇಂದು ಪೂರ್ವಭಾವಿ ಸಭೆ ನಡೆಯಲಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.