ಬೆಂಗಳೂರು –
ಪ್ರತಿ ವರ್ಷ ಸಡಗರ ಸಂಭ್ರಮದಿಂದ ಉತ್ಸಾಹ ದಿಂದ ಹೆಮ್ಮೆಯಿಂದ ಆಚರಣೆ ಮಾಡಲಾಗುತ್ತಿದ್ದ ಶಿಕ್ಷಕರ ವರ್ಗಾವಣೆಯನ್ನು ಈ ಬಾರಿ ಬಹಿಷ್ಕಾರ ಮಾಡಲು ನಿರ್ಧಾರವನ್ನು ತಗೆದುಕೊಂಡಂತೆ ಕಾಣುತ್ತಿದೆ.ಹೌದು ವರ್ಗಾವಣೆ ವಿಚಾರದಲ್ಲಿ ಈವರೆ ಗೆ ಕೇಳಿ ಕೇಳಿ ಬೇಸತ್ತ ನಾಡಿನ ಶಿಕ್ಷಕರು ಈವರ್ಷ ಬಹಿಷ್ಕಾರ ಮಾಡಿ ಹೋರಾಟಕ್ಕೆ ಮುಂದಾಗಿದ್ದಾರೆ. ಹೌದು ಸಪ್ಟಂಬರ್ 5 ರಂದು ವರ್ಗಾವಣೆ ವಂಚಿತ ಅದೇಷ್ಟೋ ಶಿಕ್ಷಕರು ಈ ಒಂದು ಶಿಕ್ಷಕರ ದಿನಾಚರ ಣೆಯನ್ನು ದಿಕ್ಕರಿಸಿ ಹೋರಾಟವನ್ನು ಮಾಡಲು ನಿರ್ಧಾರವನ್ನು ತಗೆದುಕೊಂಡಿದ್ದಾರೆ.
ಹೀಗಾಗಿ ಶಿಕ್ಷಕರ ದಿನಾಚರಣೆ ದಿನದಂದೇ ಯಾರಿಗೂ ಯಾವ ಇಲಾಖೆಗೂ ಇಲ್ಲದ ವರ್ಗಾವಣೆಯ ಅವೈಜ್ಞಾನಿಕ ನೀತಿಯ ವಿರುದ್ದ ಬೆಂಗಳೂರಿನಲ್ಲಿ ಹೋರಾಟವನ್ನು ಮಾಡಲು ಈಗಾಗಲೇ ಗ್ರಾಮೀಣ ಶಿಕ್ಷಕರ ಸಂಘದ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ನಿನ್ನೆ ನಡೆದ ವೆಬಿನಾರ್ ಸಭೆಯಲ್ಲಿ ತಿರ್ಮಾನವನ್ನು ತಗೆದುಕೊಂಡಿದ್ದು ಸಪ್ಬಂಬರ್ 5 ರಂದು ಬೆಂಗಳೂ ರಿನಲ್ಲಿ ಹೋರಾಟ ಮಾಡುತ್ತಿದ್ದಾರೆ.
ಹೀಗಾಗಿ ಈವರ್ಷ ಈ ಒಂದು ಶಿಕ್ಷಕರ ದಿನಾಚರ ಣೆಯನ್ನು ಅವರೇ ಬಹಿಷ್ಕಾರ ಮಾಡಿ ತಮ್ಮ ಬೇಡಿಕೆಗಳ ಕುರಿತಂತೆ ಹೋರಾಟವನ್ನು ಮಾಡಲು ಮುಂದಾಗಿದ್ದಾರೆ. ಇನ್ನೂ ಕೂಡಾ ಕಾಲ ಮಿಂಚಿಲ್ಲ ಈ ಕೂಡಲೇ ನಾಡಿನ ಮುಖ್ಯಮಂತ್ರಿಗಳು ಇಲ್ಲವೇ ಶಿಕ್ಷಣ ಸಚಿವರು ಗ್ರಾಮೀಣ ಶಿಕ್ಷಕರ ಸಂಘದ ಪವಾಡೆಪ್ಪ,ಎಲ್ ಐ ಲಕ್ಕಮ್ಮನವರ,ಸಂಗಮೇಶ ಖನ್ನಿನಾಯಕ.ಮಲ್ಲಿಕಾರ್ಜುನ ಉಪ್ಪಿನ,ಎಸ್ ಎಫ್ ಪಾಟೀಲ ನಾರಾಯಣಸ್ವಾಮಿ ಚಿಂತಾಮಣಿ, ಗುರು ತಿಗಡಿ,ಸೇರಿದಂತೆ ಹಲವು ಹಿರಿಯ ಮುಖಂಡರೊಂ ದಿಗೆ ಮಾತುಕತೆ ಮಾಡಿ ಕೂಡಲೇ ಸಮಸ್ಯೆಯನ್ನು ಇತ್ಯರ್ಥ ಮಾಡಬೇಕು ಇಲ್ಲವಾದರೆ ಶಿಕ್ಷಕರ ದಿನಾಚ ರಣೆಯ ದಿನದಂದು ಶಿಕ್ಷಕರೇ ಬೀದಿಗಿಳಿದರೆ ಅದೊಂದು ಇಲಾಖೆಗೆ ದೊಡ್ಡ ಅವಮಾನ ಮಾಡಿದಂತಾಗುತ್ತದೆ.