ಚಿಕ್ಕಬಳ್ಳಾಪುರ –
ಮಹಾಮಾರಿಗೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಬಲಿಯಾಗಿದ್ದು ಇನ್ನೂ ಅವರನ್ನು ಉಳಿಸಿಕೊಳ್ಳಲು ಆಸ್ಪತ್ರೆಯ ಎದುರೇ ಕುಟುಂಬಸ್ಥರ ಗೋಳಾಟ ಮುಗಿಲು ಮುಟ್ಟಿತ್ತು ಹೌದು ಇಂಥದೊಂದು ಕರು ಣಾ ಜನಕ ಚಿತ್ರಣಕ್ಕೆ ಸಾಕ್ಷಿಯಾಗಿ ಕಂಡು ಬಂದಿದ್ದು ಚಿಕ್ಕಬಳ್ಳಾಪುರ ದಲ್ಲಿ.ಚಿಂತಾಮಣಿ ನಗರದ 48 ವರ್ಷದ ಸರ್ಕಾರಿ ಶಾಲೆಯ ಶಿಕ್ಷಕ ವೆಂಕಟೇಶಪ್ಪ ಮಹಾಮಾರಿಗೆ ಬಲಿಯಾಗಿದ್ದಾರೆ. ಅವರು ಕಳೆದ ಶುಕ್ರವಾರ ಉಸಿರಾಟದ ಸಮಸ್ಯೆಯಿಂದ ಜಿಲ್ಲೆಯ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ

ಇನ್ನೂ ಈ ಒಂದು ಸಾವಿಗೆ ಆಸ್ಪತ್ರೆ ವೈದ್ಯರೇ ನೇರ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ ಆಸ್ಪತ್ರೆ ಯ ಎದುರೇ ಕಣ್ಣೀರು ಹಾಕಿದ್ದಾರೆ.

ಸಮರ್ಪಕ ಸೂಕ್ತ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಶಿಕ್ಷಕರ ಮಗ ವಂಶಿಕೃಷ್ಣ ಆರೋಪಿಸಿದ್ದಾರೆ. ಅಲ್ಲದೇ ವೆಂಕಟೇಶ ಪ್ಪ ಸಾವಿನಿಂದ ತಾಯಿ- ಮಗನ ಕಣ್ಣೀರು ಹಾಗೂ ಗೋಳಾಟ ಅಲ್ಲಿದ್ದ ಜನರ ಕಣ್ಣಲ್ಲಿ ನೀರು ಬರುವಂತೆ ಮಾಡಿ ಕಂಡು ಬಂದಿತು.