ದಾವಣಗೆರೆ –
ಕರ್ತವ್ಯದಲ್ಲಿ ಇದ್ದಾಗಲೇ ಹೃದಯಾಘಾತದಿಂದ ಶಿಕ್ಷಕ ಸಾವಿಗೀಡಾದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ ದಾವಣಗೆರೆ ಜಿಲ್ಲೆಯ ಮಾಯಕೊಂಡದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಈ ಒಂದು ಘಟನೆ ನಡೆದಿದೆ ವಿಜ್ಞಾನ ಶಿಕ್ಷಕ ಕೆ ,ನಾಗರಾಜ್ ಕರಿಗೌಡ(48) ಮೃತ ಶಿಕ್ಷಕ ರಾಗಿದ್ದು ಮಕ್ಕಳಿಗೆ ಪಾಠ ಮಾಡಿ ಕ್ಲಾಸ್ ನಿಂದ ಹೊರ ಬರುತ್ತಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ.
ತಕ್ಷಣ ಸಹೋದ್ಯೋಗಿಗಳಿಂದ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಿದ್ದು ನಂತರ ಹೆಚ್ವಿನ ಚಿಕಿತ್ಸೆಗೆ ದಾವಣಗೆರೆಯ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಯಿತು ಆದರೂ ಕೂಡಾ ಚಿಕಿತ್ಸೆ ಮಾಡುವಾಗ ಸಾವನ್ನಪ್ಪಿದರು ಶಿಕ್ಷಕ ನಾಗರಾಜ್ ಶಿಕ್ಷಕನ ಸಾವಿಗೆ ಸಂತಾಪ ಸೂಚಿಸಿದ್ದಾರೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು.
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..