ಶಿಕ್ಷಕರುಶಾಲೆಗೆ ಹೋಗದಿದ್ದರೂ ಸಂಬಳ ಬರುತ್ತದೆ – 12 ತಿಂಗಳ ಗೈರಾದರೂ ವೇತನ ನೀಡಿದ ಇಲಾಖೆ – ಶಿಕ್ಷಣ ಸಚಿವರೇ ಒಮ್ಮೆ ಈ ಸ್ಟೋರಿ ನೋಡಿ…..

Suddi Sante Desk

ವಿಜಯಪುರ –

ಸಾಮಾನ್ಯವಾಗಿ ಕೆಲಸಕ್ಕೆ ಗೈರಾದರೆ ಯಾರಿಗೂ ಕೂಡಾ ವೇತನವನ್ನು ನೀಡೊದಿಲ್ಲ ಆದರೆ ಶಿಕ್ಷಣ ಇಲಾಖೆಯಲ್ಲಿ ಮಾತ್ರ ವಿಚಿತ್ರವಾದ ಕಾನೂನೊಂದು ಇದೆಯಂತೆ ಕಾಣುತ್ತಿದೆ. ಹೌದು ಶಿಕ್ಷಕರೊಬ್ಬರು ಕಳೆದ 12 ತಿಂಗಳಿನಿಂದ ಶಾಲೆಗೆ ಸತತವಾಗಿ ಗೈರಾಗಿದ್ದಾರೆ. ಆದ್ರೂ ಕೂಡಾ ಇವರ ವೇತನವನ್ನು ಇಲಾಖೆ ಸರಿಯಾಗಿ ಕೈ ತುಂಬಾ ನೀಡಿದೆ.ಹೌದು ಇಂತಹದೊಂದು ಪ್ರಕರಣವೊಂದು ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಲಾಖೆ ಯಲ್ಲಿ ಶಿಕ್ಷಕರು ಶಾಲೆಗೆ ಹೋಗದೇ ಸಂಬಳ ಮಾತ್ರ ಪಡೆಯುತ್ತಿದ್ದಾರೆ ಎಂಬೊದಕ್ಕೆ ಈ ಒಂದು ಪ್ರಕರಣ ವೇ ತಾಜಾ ಉದಾಹರಣೆಯಾಗಿದೆ.

ಶಾಲೆಗೆ ಅನಧಿಕೃತ ಗೈರಾದರೂ ಶಿಕ್ಷಕರೊಬ್ಬರಿಗೆ ಸ್ಯಾಲರಿ ಮಾಡಿದೆ ಶಿಕ್ಷಣ ಇಲಾಖೆ.ಬರೋಬ್ಬರಿ 12 ತಿಂಗಳು ಗೈರಾದರು ಕೂಡಾ ವೇತನವನ್ನು ಮಾಡ ಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರಕಾರಿ ಎಚ್.ಪಿ.ಎಸ್ ಕ್ಯಾತನ ಡೋಣಿ ಶಾಲೆಯ ಶಿಕ್ಷಕ ಕೆ.ಎಂ ಕುಂಬಾರ ಎಂಬು ವರು ಸತತವಾಗಿ ಶಾಲೆಗೆ ಗೈರಾಗಿದ್ದಾರೆ.ಆದರೂ ಕೂಡಾ ಇವರಿಗೆ ಇಲಾಖೆ ಮಾತ್ರ ಸಂಬಳವನ್ನು ನೀಡಿದೆ. ಶಿಕ್ಷಕ ಶಾಲಾ ದಾಖಲಾತಿಯಲ್ಲಿ ಗೈರಾದ ರೂ ಸಂಬಳ ಮಾತ್ರ ಅಕೌಂಟ್ ಗೆ ಜಮಾವಾಗಿದ್ದು ಇದರಿಂದಾಗಿ ಇಲಾಖೆಯಲ್ಲಿ ದೊಡ್ಡ ಮಟ್ಟದಲ್ಲಿ ಗೋಲ್ಮಾಲ್ ನಡೆದಿರೊದು ಇದರೊಂದಿಗೆ ಬೆಳಕಿಗೆ ಬಂದಿದೆ.

ಶಾಲೆಗೆ ಬರದೇ ಸಂಬಳ ಪಡೆಯುತ್ತಿರುವದರಾರೂ ಹೆಗೇಂದು ಪ್ರಜ್ಞಾವಂತರು ಪ್ರಶ್ನೆ ಮಾಡಿದ್ದಾರೆ. ಅಧಿಕಾರಿಗಳೊಂದಿಗೆ ಶಿಕ್ಷಕ ಶಾಮಿಲಾಗಿ ಸಂಬಳ ಹಂಚಿಕೊಂಡರಾ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದ್ದು ಸರಿಯಾಗಿ ಶ್ರಮ ಪಟ್ಟು ಕೆಲಸ ಮಾಡಿದರು ಕೂಡಾ ಕೆಲವೊಮ್ಮೆ ವೇತವನ್ನು ನೀಡದ ಇಲಾಖೆ ಅದರಲ್ಲೂ ಅಧಿಕಾರಿಗಳು ಹೇಗೆ ಸಂಬಳವನ್ನು ನೀಡಿದರು ಎಂಬ ಪ್ರಶ್ನೆ ಕಾಡುತ್ತಿದೆ. ಇನ್ನಾದರೂ ಇದರಿಂದ ಎಚ್ಚೇತ್ತುಕೊಂಡ ಸಚಿವರು ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.