ಬೆಂಗಳೂರು –
ರಾಜ್ಯದಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರಾಗಿ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರನ್ನು ಮಾಡಿದ BEO ರೊಬ್ಬರು ನಿಧನರಾಗಿದ್ದಾರೆ. ಹೌದು ಬೆಂಗಳೂರು ಉತ್ತರ-4 ರಲ್ಲಿ BEO ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಯುತ ಕಮಲಾಕರ ರವರೇ ಮೃತ ಅಧಿಕಾರಿ ಯಾಗಿದ್ದಾರೆ.ಇಂದು ಬೆಳಿಗ್ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಕರೆದು ಕೊಂಡು ಹೋಗಲಾಯಿತು.ಇನ್ನೇನು ಚಿಕಿತ್ಸೆ ನೀಡಬೇಕು ಎನ್ನುವಷ್ಟರಲ್ಲಿಯೇ ನಿಧನರಾದರು.
ಶ್ರೀಯುತರು ಇಲಾಖೆ ಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆ ಕೆಲಸ ಕಾರ್ಯಗಳೊಂದಿಗೆ ದಕ್ಷ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು.ಮೂಲತಃ ಶಿವಮೊಗ್ಗದವರಾಗಿದ್ದಾರೆ.ಮೂಲದವರಾಗಿದ್ದು ಈ ಹಿಂದೆ ಶಿವಮೊಗ್ಗ ತಾಲ್ಲೂಕಿನ BEO ಆಗಿಯೂ, ನಂತರ ಶಿಕ್ಷಣ ಇಲಾಖೆಯ ಬೆಂಗಳೂರಿನ ಆಯುಕ್ತರ ಕಛೇರಿಯಲ್ಲಿ EST-1 ಸೆಕ್ಷನ್ ನಲ್ಲಿ SADPI ಆಗಿಯೂ ಕಾರ್ಯ ನಿರ್ವಹಿ ಸಿದ್ದರು. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ನಾಡಿನ ಶಿಕ್ಷಕರು ಪ್ರಾರ್ಥಿಸಿ ದ್ದಾರೆ.ಇನ್ನೂ ಮೃತ ಅಧಿಕಾರಿಯಿಂದ ಇಲಾಖೆಗೆ ತುಂಬಲಾ ರದ ದೊಡ್ಡ ಪ್ರಮಾಣದಲ್ಲಿ ನಷ್ಟ ವಾಗಿದ್ದು ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಅಧಿಕಾರಿ ಗೆ ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿದ್ದಾರೆ. ಶಿಕ್ಷಕರಾ ಗಿರುವ ಕಿರಣ ರಘುಪತಿ. ರಾಮಾಂಜಯನೇಯ, ಪವಾಡೆಪ್ಪ,ನಾರಾಯಣಸ್ವಾಮಿ,ಮಲ್ಲಿಕಾರ್ಜುನ ಉಪ್ಪಿನ,ಎಲ್ ಐ ಲಕ್ಕಮ್ಮನವರ, ಡಾ ಲತಾ ಎಸ್ ಮುಳ್ಳೂರ,ರಂಗಸ್ವಾಮಿ,ಹನಮಂತ ಬೂದಿಹಾಳ,ಗುರು ತಿಗಡಿ,ಅಯ್ಯಪ್ಪ ಮೋಕಾಶಿ,ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿದ್ದಾರೆ.