ಬೆಂಗಳೂರು –
ಸಾಮಾನ್ಯವಾಗಿ ರಾಜ್ಯದಲ್ಲಿ ಸಂಘಟನೆ ಅಂದರೆ ಯಾವುದೇ ವಿಚಾರದಲ್ಲಿ ರಾಜೀ ಇಲ್ಲದೇ ನಿರ್ಣಯ ತಗೆದುಕೊಂಡಂತೆ ಬೇಡಿಕೆ ಈಡೇರುವವರೆ ಇಲ್ಲವೇ ಎದುರಾಳಿಗಳಿಗೆ ಮಂಡಿಯೂರುವಂತೆ ಮಾಡು ವಂತೆ ಬಲಿಷ್ಠವಾದ ಸಂಘಟನೆ ಎಂದರೆ ನ್ಯಾಯ ವಾದಿಗಳ ಸಂಘ. ಸಂಘಟನೆಗೆ ಇಲ್ಲವೇ ನ್ಯಾಯ ವಾದಿಗಳಿಗೆ ಯಾರೇ ಏನೇ ಅಂದರು ಮಾತನಾಡಿ ದರು ಇಲ್ಲವೇ ಬೇಡಿಕೆ ಈಡೇರಿವಂತೆ ಕಡ್ಡಿ ತುಂಡಾ ದಂತೆ ಮಾಡಿ ತಮ್ಮ ಗಟ್ಟಿತನವನ್ನು ಈಗಲೂ ಉಳಿಸಿಕೊಂಡು ಬರುತ್ತಿದ್ದಾರೆ ಆದರೆ ಇದನ್ನು ನೋಡುತ್ತಿದ್ದರೆ ಇವರಿಗಿಂತ ರಾಜ್ಯದಲ್ಲಿ ಹೆಚ್ಚು ನಮ್ಮ ಶಿಕ್ಷಕರು ಇದ್ದಾರೆ.
ತಮ್ಮ ನೋವುಗಳಿಗೆ ಧ್ವನಿಯಾಗಿ ಶಿಕ್ಷಕರ ಸಂಘಟ ನೆಗಳನ್ನು ಹುಟ್ಟು ಹಾಕಿದ್ದಾರೆ.ಏನೇಲ್ಲಾ ಕಷ್ಟ ಪಟ್ಟು ಸಂಘಟನೆ ಅದಕ್ಕೊಂದು ಆಡಳಿತ ಮಂಡಳಿ ರಚನೆ ನಮ್ಮ ಕಷ್ಟ ನೋವು ನಲಿವುಗಳಿಗೆ ನೆರವಾಗುತ್ತಾರೆ ಎಂದುಕೊಂಡು ರೂಪಗೊಂಡ ಈ ಸಂಘಟನೆ ಮತ್ತು ಆಡಳಿತ ಮಂಡಳಿಯವರು ಅದರಲ್ಲೂ ಗಟ್ಟಿಯಾಗಿ ಧ್ವನಿ ಎತ್ತಬೇಕಾಗಿರುವ ರಾಜ್ಯಾಧ್ಯಕ್ಷರು ಹೆಸರಿಗಷ್ಟೇ ಸಿಮೀತವಾದಂತೆ ಕಾಣುತ್ತದೆ.ಕಳೆದ ಹಲವಾರು ವರುಷಗಳಿಂದ ನರಕಯಾತನೆಯ ನಡುವೆ ಕಷ್ಟ ಪಡುತ್ತಾ ಕಣ್ಣೀರಿನ ನಡುವೆ ವೃತ್ತಿ ಮಾಡುತ್ತಿರುವ ಶಿಕ್ಷಕರಿಗೆ ಯಾರೊಬ್ಬರು ನೆರವಾಗು ತ್ತಿಲ್ಲ.ಎಷ್ಟೋ ಅಧಿಕಾರಗಳು ಮುಖ್ಯಮಂತ್ರಿಗಳು ಶಿಕ್ಷಣ ಸಚಿವರು ಸಂಘಟನೆಯ ರಾಜ್ಯಾಧ್ಯಕ್ಷರು ಬಂದು ಹೋದರು ಸಧ್ಯ ಇದ್ದಾರೆ ಆದ್ರೂ ಕೂಡಾ ಯಾರೂ ಯಾವುದೇ ಬದಲಾವಣೆ ಮಾಡುತ್ತಿಲ್ಲ ನೆರವಾಗುತ್ತಿಲ್ಲ ಹೀಗಾಗಿ ಯಾವ ಇಲಾಖೆಗೆ ಇಲ್ಲದೇ ಯಾರಿಗೂ ಇಲ್ಲದೇ ವರ್ಗಾವಣೆಯ ನೀತಿ ಹಾಗೇ ಇದೆ.
ಇದರ ನಡುವೆ ಮತ್ತೆ ಈ ಬಾರಿಯೂ ಕೌನ್ಸಲಿಂಗ್ ಆರಂಭವಾಗುತ್ತಿದೆ.ಸಾಮಾನ್ಯವಾಗಿ ಸಣ್ಣ ಪುಟ್ಟ ವಿಚಾರಗಳ ಕುರಿತಂತೆ ನಾವೇ ಮಾಡಿದ್ದು ನಾನೇ ಮಾಡಿದ್ದು ಅಂತಾ ಹೇಳಿಕೊಳ್ಳುವ ಸಂಘಟನೆಯ ರಾಜ್ಯಾಧ್ಯಕ್ಷರಿಗೆ ಶಿಕ್ಷಕರ ವರ್ಗಾವಣೆಯ ನರಕ ಯಾತನೆ ಕಾಣುತ್ತಿಲ್ಲವೇ ಕೇಳುತ್ತಿಲ್ಲವೇ ವರ್ಗಾವ ಣೆಯ ವಿಚಾರದಲ್ಲಿ ದಿನಕ್ಕೇರೆಡು ವೇಬಿನಾರ್ ಸಭೆ ಮಾಡಿ ಚರ್ಚೆ ಮಾಡಿದ್ದು ಸರಿಯಾದ ವಿಚಾರ ಅದರಿಂದಾದರೂ ಏನಾದರೂ ಒಂದು ತಿರ್ಮಾನ ನಿರ್ಧಾರ ಬಂತಾ ನಿಮ್ಮನ್ನೇ ನಮ್ಮ ರಾಜ್ಯಾಧ್ಯಕ್ಷರು ಎಂದುಕೊಂಡು ಹೆಮ್ಮೆಯಿಂದ ಇರುವ ನಾಡಿನ ಶಿಕ್ಷಕರಿಗೆ ಇನ್ನಾದರೂ ನ್ಯಾಯ ದೊರಕಿಸಿ ನೀವಿರುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಂದು ಗೌರವ ನೀಡಿ ಇದು ವರ್ಗಾವಣೆ ಸಿಗದೇ ನೊಂದುಕೊಂಡಿರುವ ನಾಡಿನ ಶಿಕ್ಷಕರ ಅಭಿಪ್ರಾಯವಾಗಿದೆ.