ಬೆಂಗಳೂರು –

OTS ವಿಚಾರದಲ್ಲಿ ಕಾದು ಕಾದು ಬೇಸತ್ತಿರುವ ಶಿಕ್ಷಕರು ಈಗ ಇದಕ್ಕಾಗಿ ಸಿಡಿದೆದ್ದಿರುವ ಶಿಕ್ಷಕರು ಈಗ ಹೋರಾಟದ ಹಾದಿ ಹಿಡಿಯುತ್ತಿದ್ದಾರೆ. ಹೌದು ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕವಾದ ವರ್ಗಾವಣೆಯ ನೀತಿ ನಿಯಮಗಳಿಂದಾಗಿ ಹೆಂಡತಿ ಮಕ್ಕಳು ತಂದೆ ತಾಯಿ ಊರು ಬಂಧು ಬಳಗ ಹೀಗೆ ಎಲ್ಲರನ್ನೂ ಬಿಟ್ಟು ದಿಕ್ಕಿಗೊಬ್ಬ ರಂತೆ ಇರುವ ಶಿಕ್ಷಕರು ಎಲ್ಲರ ಹಾಗೇ ನಮಗೂ ಈ ಒಂದು ವಿಚಾರದಲ್ಲಿ ನ್ಯಾಯ ಸಿಕ್ಕೆ ಸಿಗುತ್ತದೆ ಎಂದು ಈವರೆಗೆ ಕಾದು ಕಾದು ಬೇಸುತ್ತಿರುವ ನಾಡಿನ ಶಿಕ್ಷಕರು ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಹೋರಾಟವನ್ನು ಮಾಡಿ ಭರವಸೆಯ ಹಿನ್ನಲೆಯಲ್ಲಿ ಹೋರಾಟವನ್ನು ಹಿಂದೆ ತಗೆದು ಕೊಂಡು ಯಾವುದೇ ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಈಗ ಮತ್ತೆ ಸಿಡಿದೆದ್ದಿದ್ದಾರೆ ರಾಯಚೂರು ಜಿಲ್ಲೆಯ ಮಾನ್ವಿಯ ಶಿಕ್ಷಕರು ಸೇವಾವಧಿಯಲ್ಲಿ ಒಮ್ಮೆ ತಮ್ಮ ಸ್ವಂತ ಜಿಲ್ಲೆಗೆ ಅಥವಾ ಬಯಸಿದ ಜಿಲ್ಲೆಗೆ ವರ್ಗಾವಣೆಯನ್ನು ಬಯಸಿ ಕಲಿಕಾ ಚೇತರಿಕೆ ಹಾಗೂ ವಿದ್ಯಾ ಪ್ರವೇಶ ತರಬೇತಿಯಲ್ಲಿ ಕಪ್ಪುಪಟ್ಟಿ ಧರಿಸುವ ಮೂಲಕ ಶಿಕ್ಷಕರು ಭಾಗವಹಿಸಿ ಪ್ರತಿಭಟಿಸಿದರು.


ಮಾನ್ವಿ ತಾಲೂಕಿನಲ್ಲಿ ಇಂದು ಕಲಿಕಾ ಚೇತರಿಕೆ ತರಬೇತಿ ಯಲ್ಲಿ ಒಂದು ಬಾರಿ ಸ್ವಂತ ಜಿಲ್ಲೆಗೆ ವರ್ಗಾವಣೆ OTS ಗಾಗಿ ಇಲಾಖೆಯ ಮತ್ತು ಸರಕಾರದ ಗಮನ ಸೆಳೆಯಲು ಕಪ್ಪು ಪಟ್ಟಿ ಧರಿಸಿ ತರಬೇತಿಗೆ ಹಾಜರಾಗಿದ್ದರು ತರಬೇತಿಗೆ ಆಗಮಿಸಿದ್ದ ಸಾಕಷ್ಟು ಪ್ರಮಾಣದಲ್ಲಿನ ಶಿಕ್ಷಕರು ಸಾಮೂ ಹಿಕವಾಗಿ ಕೈ ಗೆ ಕಪ್ಪು ಪಟ್ಟಿಯನ್ನು ಧರಿಸಿಕೊಂಡು ಪ್ರತಿಭ ಟನೆಯನ್ನು ಮಾಡಿದರು
ಇಲಾಖೆಯ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿ ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹವನ್ನು ಮಾಡಿದರು ಇನ್ನೂ ಶಿಕ್ಷಣ ಸಚಿವರಾಗಲಿ ಸಂಘಟನೆಯ ನಾಯಕರಾ ಗಲಿ ಶಿಕ್ಷಕರ ಬೇಡಿಕೆಗಳ ಕುರಿತಂತೆ ನೋಡಿ ಸ್ಪಂದಿಸೋದು ಅವಶ್ಯಕವಿದೆ ಇಲ್ಲವಾದರೆ ಬರವ ದಿನಗಳಲ್ಲಿ ಶಿಕ್ಷಕರು ದೊಡ್ಡ ಪ್ರಮಾಣದಲ್ಲಿ ಬೀದಿಗಿಳಿದು ಹೋರಾಟವನ್ನು ಮಾಡಲಿದ್ದಾರೆ.