ಬೆಂಗಳೂರು –
ಸಧ್ಯ ಕೋವಿಡ್ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಹಣ ಕಾಸಿನ ನೆರವು ನೀಡಲು ಐದು ದಿನಗಳ ವೇತನವ ನ್ನು ದೇಣಿಗೆ ನೀಡಿ ಎಂಬ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಮನವಿ ಯನ್ನು, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ಪಷ್ಟವಾಗಿ ನಿರಾಕರಿಸಿದೆ.

ಅನುದಾನ ರಹಿತ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂ ದಿಗೆ ಪ್ಯಾಕೇಜ್ ನೀಡಬೇಕು ಎಂದು ವಿಧಾನ ಪರಿಷ ತ್ತಿನ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ಸದಸ್ಯ ರು ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿ ಯಡಿ ಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ದ್ದರು.ಇದರ ಬೆನ್ನಲ್ಲೇ ಶಿಕ್ಷಕರ ಸಂಘಗಳ ಪದಾಧಿಕಾ ರಿಗಳ ಜತೆ ಸಭೆ ನಡೆಸಿದ್ದ ಸಚಿವ ಸುರೇಶ್‌ಕುಮಾ ರ್, ಐದು ದಿನಗಳ ವೇತನ ದೇಣಿಗೆಯಾಗಿ ನೀಡಿ ಎಂದು ಮನವಿ ಮಾಡಿದ್ದರು.

ಅದಕ್ಕೆ ಸಂಘದ ಪದಾಧಿಕಾರಿಗಳು ಒಪ್ಪದೇ ಇದ್ದಾಗ ಕನಿಷ್ಠ ಒಂದು ದಿನದ ವೇತನ ನೀಡುವಂತೆ ಮನ ವೊಲಿಸುವ ಯತ್ನ ಮಾಡಿದ್ದರು.ಒಂದು ದಿನ ವೇತನ ಕೊಡಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರ್ಣಯ ತೆಗೆದು ಕೊಂಡಿದೆ.ಹಾಗೊಂದು ವೇಳೆ ಒಂದು ದಿನದ ವೇತ ನ ನೀಡಬೇಕಾದರೆ ಸರ್ಕಾರ ನಮ್ಮ ಬೇಡಿಕೆಗಳನ್ನು ಒಪ್ಪಬೇಕು ಮತ್ತು ತುಟ್ಟಿಭತ್ಯೆ ಬಿಡುಗಡೆ ಮಾಡ ಬೇಕು ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ. ಇದರ ನಂತರ ಇನ್ನೇನು ಬೆಳವಣಿಗೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕು