ಬೆಂಗಳೂರು –
OTS ಮತ್ತು ವರ್ಗಾವಣೆಯಲ್ಲಿ ಶೇಕಡಾ 25 ನ್ನು ತಗೆ ಯುವ ವಿಚಾರ ಕುರಿತಂತೆ ಬೆಂಗಳೂರಿನಲ್ಲಿ ನಿನ್ನೆಯಿಂದ ಶಿಕ್ಷಕರು ಬೆಂಗಳೂರು ಚಲೋ ವನ್ನು ಆರಂಭಿಸಿದ್ದು ಹೀಗಾಗಿ ಮೊದಲನೇಯ ದಿನವಾದ ನಿನ್ನೆ ಸಾಂಕೇತಿಕವಾಗಿ ಸರ್ಕಾರಿ ನೌಕರರ ಆವರಣದಲ್ಲಿ ಹೋರಾಟವನ್ನು ಮಾಡಿದ ಶಿಕ್ಷಕರು ಇಂದು ತಮ್ಮ ಹೋರಾಟವನ್ನು ಸ್ವಾತಂತ್ರ್ಯ ಉದ್ಯಾನವನದಲ್ಲಿ ಆರಂಭ ಮಾಡಿದ್ದಾರೆ

ರಾಜ್ಯದ ಮೂಲೆ ಮೂಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿದು ಕೊಂಡು ಈ ಒಂದು ಹೋರಾಟವನ್ನು ಮಾಡುತ್ತಿದ್ದು ಇನ್ನೂ ಎರಡನೇಯ ದಿನವಾದ ಇಂದೂ ಕೂಡಾ ಈ ಒಂದು ಹೋರಾಟ ಮುಂದುವರೆದಿದ್ದು ಇನ್ನೂ ಶಿಕ್ಷಕರ ಈ ಒಂದು ಹೋರಾಟಕ್ಕೆ ಇಂದು ಕೊನೆಗೂ ರಾಜ್ಯದ ಶಿಕ್ಷಕರ ಧ್ವನಿಯಾ ಗಿರುವ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇ ಖರ ನುಗ್ಗಲಿ ಇನ್ನೂ ವಿಧಾನ ಪರಿಷತ್ ಸದಸ್ಯರಾಗಿರುವ ಪುಟ್ಟಣ್ಣಯ್ಯ ಅವರು ವೇದಿಕೆಗೆ ಆಗಮಿಸಿ ಶಿಕ್ಷಕರ ಸಮಸ್ಯೆ ಯನ್ನು ಆಲಿಸಿದರು.

ಈಗಾಗಲೇ ಬೆಂಗಳೂರು ಚಲೋ ವೇದಿಕೆಯ ಮೂಲಕ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಾರಾಣಯಸ್ನಾಮಿ ಸೇರಿದಂತೆ ಹಲವರು ಈ ಒಂದು ಹೋರಾಟದ ನೇತ್ರತ್ವವನ್ನು ವಹಿಸಿಕೊಂಡಿದ್ದು ಕೆಲವು ಶಿಕ್ಷಕ ಬಂಧುಗಳು ತಮ್ಮ ಮಕ್ಕಳೊಂದಿಗೆ ಹೋರಾಟಕ್ಕೆ ಬಂದಿದ್ದು
ಇಂದು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೇ ವಿಧಾನ ಪರಿಷತ್ ಸದಸ್ಯರು ಪ್ರತಿಭಟನಾ ಸ್ಥಳಕ್ಕೇ ಆಗಮಿಸಿ ಸಮಸ್ಯೆಯನ್ನು ಆಲಿಸಿದರು.ಇನ್ನೂ ಇತ್ತ ಈ ಒಂದು ಹೋರಾಟಕ್ಕೆ ಎಲ್ ಐ ಲಕ್ಕಮ್ಮನ್ನವರ ಚಂದ್ರಶೇ ಖರ ಶೆಟ್ರು ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಬೆಂಬಲವನ್ನು ಸೂಚಿಸಿದ್ದಾರೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇದೆ ಎಂದು ಹೇಳಿ ಆತ್ಮಸ್ಥೈರ್ಯವನ್ನು ತುಂಬಿದ್ದಾರೆ.