ವೇತನಕ್ಕಾಗಿ ಬೀದಿಗೀಳಿದ ಶಿಕ್ಷಕರು –  BEO ಕಚೇರಿ ಮುಂದೆ ಶಿಕ್ಷಕರ ಪ್ರತಿಭಟನೆ ಹೀಗ್ಯಾಕೆ ಆಯಿತು…..

Suddi Sante Desk
ವೇತನಕ್ಕಾಗಿ ಬೀದಿಗೀಳಿದ ಶಿಕ್ಷಕರು –  BEO ಕಚೇರಿ ಮುಂದೆ ಶಿಕ್ಷಕರ ಪ್ರತಿಭಟನೆ ಹೀಗ್ಯಾಕೆ ಆಯಿತು…..

ವೇತನಕ್ಕಾಗಿ ಬೀದಿಗೀಳಿದ ಶಿಕ್ಷಕರು –  BEO ಕಚೇರಿ ಮುಂದೆ ಶಿಕ್ಷಕರ ಪ್ರತಿಭಟನೆ ಹೀಗ್ಯಾಕೆ ಆಯಿತು…..ಹೌದು 3 ತಿಂಗಳಿನಿಂದ ವೇತನ ವಿಲ್ಲದೇ ರಾಜ್ಯದ ಶಿಕ್ಷಕರು ಪರದಾಡುತ್ತಿದ್ದಾರೆ.

ವಿಜಯಪುರ ಗ್ರಾಮೀಣವಲಯದಲ್ಲಿ  ಎಸ್,ಎಸ್,ಎ,ದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ, ಸಿ,ಆರ್,ಪಿ, ಹಾಗೂ ಬಿ,ಆರ್,ಪಿ,ಇದಲ್ಲದೆ ಆರ್,ಎಂ,ಎಸ್,ಎ ದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ ವೃಂದದ ಅವರಿಗೆ ವೇತನವಿಲ್ಲದೆ 3ತಿಂಗಳಿ ನಿಂದ ಪರದಾಡುತ್ತಿದ್ದು ಶಿಕ್ಷಕರು ರೋಸಿ ಹೋಗಿದ್ದಾರೆ

ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಮುಂದೆ ಶಿಕ್ಷಕರೆಲ್ಲರೂ ಧರಣಿ ಸತ್ಯಾ ಗ್ರಹ ಮಾಡಿದರು.ಇನ್ನೂ ಧರಣಿ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಆಂಜನೇಯ ಅವರು ಕಳೆದ ಮೂರು ತಿಂಗಳಿ ನಿಂದ ಸಂಕಷ್ಟದಲ್ಲಿರುವ SSA ಶಿಕ್ಷಕರ ನೋವು ನಮಗೆ ಗಮನದಲ್ಲಿದೆ.

ಆ ನಿಟ್ಟಿನಲ್ಲಿ ಕಳೆದ 15 ದಿನಗಳಿಂದ ನಾವು ಕೂಡ ಪ್ರಯತ್ನಿಸುತ್ತಿದ್ದು ಬರುವ ವಾರ ಸಮಸ್ಯೆ ಪರಿಹರಿ ಸುವೆ ಧರಣಿ ಕೈ ಬಿಡುವಂತೆ ಧರಣಿನಿರತರಿಗೆ ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಭರವಸೆ ನಂತರ ಧರಣಿಯನ್ನು ಇಂದು ವಾರದ ಮಟ್ಟಿಗೆ ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ SSA ಶಿಕ್ಷರಾದ ಎಚ್ ಕೆ ಬೂದಿಹಾಳ,ಚೆನ್ನಯ್ಯ ಮಠಪತಿ, ಸಂತೋಷ್ ಕುಲಕರಣಿ,ನಿಜಪ್ಪ ಮೇಲಿನಕೇರಿ, ಮಲ್ಲಿಕಾ ರ್ಜುನ ಬೂಸಗೊಂಡ,ಸಾವಿತ್ರಿಬಾಯಿ ಪುಳೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಅಕ್ಕು ಬಾಯಿ ನಾಯಕ,ಕವಿತಾ ಕಲ್ಯಾಣಪ್ಪಗೋಳ, ಶೋಭಾ ಮೆಡಗಾರ,ಲಕ್ಷೀ ತೊರವಿ,ರೂಪಾ ಕರದಿನ, ಉದಯಕುಮಾರ ಕೋಟ್ಯಾಳ,

ಬಸವರಾಜ ಅಮರಪ್ಪಗೋಳ, ಶಿಕ್ಷಕ ಸಂಘದ ಅಧ್ಯಕ್ಷರಾದ ಎಚ್ಎಂ ಚಿತ್ತರಗಿ, ಸುದರ್ಶನ ಜೇವೂರ,ಆರ್,ಎಂ,ಪಾಟೀಲ, ಹಣಮಂತ ಕಾತರಕಿ.ವಿಶ್ವನಾಥ ಮೇತ್ರಿ, ಶ್ರೀಶೈಲ ದೊಡ್ಡಮನಿ,ಅಶೋಕ ಬನಸೋಡೆ,ಸಿದ್ದು ಕನ್ನುರ,ನೀಲಪ್ಪ ತಿಮ್ಮಾಪೂರ,ಮಂಜುನಾಥ ನೇಬಗೇರಿ,ಶಂಕರ ತಳವಾರ, ಎಂ,ಎಸ್,ಟಕ್ಕಳಕಿ, ಸಾಬು ಗಗನಮಾಲಿ,ಅಶೋಕ ಚನ್ನಬಸಗೋಳ,

ಅಶೋಕ ಭಜಂತ್ರಿ,ಗ್ರಾಮೀಣವಲಯದ ಸಿ,ಆರ್,ಪಿ,ಹಾಗೂ ಬಿ,ಆರ್,ಪಿಗಳು ಧರಣಿಯಲ್ಲಿ ಭಾಗವಹಿಸಿದ್ದರು.

ಸುದ್ದಿ ಸಂತೆ ನ್ಯೂಸ್ ವಿಜಯಪುರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.