ಇಂಡಿ –
ಬಿಡುವಿಲ್ಲದ ಶೈಕ್ಷಣಿಕ ಚಟುವಟಿಕೆ ಗಳ ನಡುವೆಯೂ ಕೂಡಾ ಇಂಡಿಯಲ್ಲಿ ಶಿಕ್ಷಕರು ಸ್ವಚ್ಚತಾ ಕಾರ್ಯವನ್ನು ಮಾಡಿದರು ಹೌದು ಸ್ವಚ್ಛ ಇಂಡಿ ಸ್ವಚ್ಛ ಇಂಡಿಯಾ ಅಭಿಯಾನ ದೊಂದಿಗೆ ಸ್ವಚ್ಚತಾ ಕಾರ್ಯವನ್ನು ಪಟ್ಟಣದಲ್ಲಿ ಮಾಡಿದರು
ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಶಿಕ್ಷಕರ ರೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೌಕರರ ಸಂಘ,ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘ, ವಿವಿಧ ಸಂಘಟನೆಗಳ ಅಧ್ಯಕ್ಷರು ಭಾಗಿ ಯಾಗಿ ಸ್ವಚ್ಚತಾ ಕಾರ್ಯ ವನ್ನು ಮಾಡಿದರು.
ಇಂದು ಇಂಡಿ ತಾಲೂಕಾ ಉಪವಿಭಗಾಧಿಕಾರಿ ಗಳಾದ ಅಬೀದ್ ಗದ್ಯಾಳ ವಿನೂತನ “YS4 ಸ್ವಚ್ಛ ಇಂಡಿ ಸ್ವಚ್ಛ ಇಂಡಿಯಾ” ಅಭಿಯಾನದ ಪ್ರಯುಕ್ತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗ ದಲ್ಲಿ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತ ದವರಿಗೆ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾ ಯಿತು
ಇನ್ನೂ ಈ ಒಂದು ಅಭಿಯಾನದಲ್ಲಿ ಪಾಲ್ಗೊಂಡ ಶಿಕ್ಷಕರು ಸಂಘದ ಪದಾಧಿಕಾರಿಗಳು ಕೈಯಲ್ಲಿ ಪೊರಕೆ ಹಿಡಿದು ಪಟ್ಟಣದಲ್ಲಿ ಸ್ವಚ್ಚತಾ ಕಾರ್ಯ ವನ್ನು ಮಾಡಿದರು.
ಸ್ವಚ್ಛತಾ ಅಭಿಯಾನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ನೌಕರರ ಸಂಘ, ಪ್ರಾಥಮಿಕ ಶಾ ಶಿಕ್ಷಕರ ಪತ್ತಿನ ಸಹಕಾರಿ ಸಂಘ, ವಿವಿಧ ಸಂಘಟನೆಗಳ ಅಧ್ಯಕ್ಷರು, ಹಾಗೂ ಸರ್ವ ಸದಸ್ಯರೆಲ್ಲರೂ ಹಾಗೂ ತಾಲೂಕಿನ ಅನೇಕ ಶಿಕ್ಷಕ ಶಿಕ್ಷಕಿಯರು ಎಲ್ಲಾ ಭಾಗವಹಿಸಿ ಅಭಿಯಾನ ಯಶಸ್ವಿಗೊಳಿಸಿದರು.
ಈ ಒಂದು ಸ್ವಚ್ಚತಾ ಕಾರ್ಯ ದಲ್ಲಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್ ವ್ಹಿ ಹರಳಯ್ಯ,ಜಿಲ್ಲಾ ಸಹಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಅಲಾಬಕ್ಷ ವಾಲಿಕಾರ, ಎಂ ಎಂ ವಾಲಿಕಾರ್ ನಿಕಟ ಪೂರ್ವ ಅಧ್ಯಕ್ಷರಾದ ವಾಯ್ ಟಿ ಪಾಟೀಲ್, ನೌಕರರ ಸಂಘದ ಅಧ್ಯಕ್ಷ ರಾದ ಎಸ್ ಡಿ ಪಾಟೀಲ್, ಎಸ್ ಆರ್ ಪಾಟೀಲ್,
ಎಂ ಡಿ ಕಂಠಿಕಾರ್,ನಿರ್ದೇಶರಾದ ಆನಂದ ಕೆಂಭಾವಿ, ಸುರೇಶ್ ಚವಾಣ್, ಜಗದೀಶ್ ಚಾವಡಿಹಾಳ,ಎನ್ ಪಿ ಎಸ್ ನೌಕರ ಸಂಘದ ಅಧ್ಯಕ್ಷರಾದ ಶ್ರೀ ಆರ್ ಜಿ ಬಂಡಿ, ಶಂಕರ್ ಕೊಳೆಕಾರ್, ಸಿ ಎಸ್ ಹಕಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಟಿ ಕೆ ಜಂಬಗಿ, ಪಿ ಜಿ ಕಲಮನಿ, ಇನ್ನಿತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಇಂಡಿ…..