ಬೆಂಗಳೂರು –
2020ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಶಿಕ್ಷಕರು ಮಾಡಿದ ದೋಷಗಳಿಂದಾಗಿ ಸರ್ಕಾರ ಈವರೆಗೆ ಶಿಕ್ಷಕರಿಗೆ 51.5 ಲಕ್ಷ ರೂ ದಂಡವನ್ನು ವಿಧಿಸಿದ್ದು 51.5 ಲಕ್ಷ ರೂ ದಂಡದಲ್ಲಿ ಈವರೆಗೆ ಕೇವಲ 14 ಲಕ್ಷ ವಸೂಲಿಯಾಗಿದ್ದು ಶಿಕ್ಷಕರು ಇನ್ನೂ 39 ಲಕ್ಷ ರೂ ದಂಡವನ್ನು ಪಾವತಿಸಬೇಕಾಗಿದೆ. ಬೆಂಗಳೂರಿನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಈ ಮಾಹಿತಿ ನೀಡಿದರು.ಜುಲೈ 2020 ರ SSLC ಪರೀಕ್ಷೆಯ ಮೌಲ್ಯಮಾಪನ ಸಂದರ್ಭದಲ್ಲಿ 4,317 ಶಿಕ್ಷಕ ರು ತಪ್ಪುಗಳನ್ನು ಮಾಡಿದ್ದು ಇದು ಮರು ಮೌಲ್ಯಮಾಪ ನಕ್ಕೆ ಕಾರಣವಾಗಿದೆ ಎಂದರು.ಇನ್ನೂ ಮರು ಮೌಲ್ಯಮಾ ಪನ ಬಯಸುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಕನಿಷ್ಠ 6 ಅಂಕಗಳ ವ್ಯತ್ಯಾಸವನ್ನು ಕಂಡು ಕೊಂಡಿದ್ದಾರೆ.ಮರು ಮೌಲ್ಯಮಾಪನದ ನಂತರ ಗರಿಷ್ಠ 20 ಅಂಕಗಳವರೆಗೆ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.ಇನ್ನೂವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಎಡವಿದ ಶಿಕ್ಷಕರ ತಪ್ಪಿಗೆ ಒಂದು ತಿಂಗಳ ಸಂಬಳ ಕಡಿತಗೊಳಿಸ ಬೇಕು ಎಂದು ಸಿ.ಎನ್ ರವಿಕುಮಾರ್ ಹೇಳಿದರು. ಸಾಂಕ್ರಾ ಮಿಕ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲತೆ ಕಾರಣದಿಂದಾಗಿ ಅಂತಹ ಶಿಕ್ಷಕರ ಸಂಬಳ ಕಡಿತಗೊಳಿಸಿ, ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ಅಂತಹ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗದು ಎಂದು ಸಿ.ಎನ್ ರವಿಕುಮಾರ್ ಹೇಳಿದರು.
ಕೆಲವರ ನಿಷ್ಠುರತೆಯಿಂದಾಗಿ ದೋಷಗಳು ಸಂಭವಿಸಿವೆ ಎಂದು ಸಚಿವರಾದ ನಾಗೇಶ್ ಹೇಳಿದರು. ಇಲಾಖೆ ಏನು ಮಾಡಬಹುದು ಎಂದು ಚಿಂತನೆ ನಡೆಸಲಿದೆ ಎಂದು ತಿಳಿಸಿದರು.ಸಾಂಕ್ರಾಮಿಕ ರೋಗದಿಂದ ಕಾರಣ 2019 20ರ SSLC ಪರೀಕ್ಷೆಗಳು ವಿಳಂಬವಾಗಿದ್ದವು ಒಟ್ಟು 19,826 ಅರ್ಜಿಗಳು ಮರುಮೌಲ್ಯಮಾಪನಕ್ಕೆ ಬಂದಿವೆ ಮತ್ತು ಅವುಗಳಲ್ಲಿ 15,591 ಅರ್ಜಿಗಳಲ್ಲಿ ಮರು ಮೌಲ್ಯ ಮಾಪನದ ನಂತರ ಆರಕ್ಕಿಂತ ಕಡಿಮೆ ಅಂಕಗಳ ವ್ಯತ್ಯಾಸ ಕಂಡುಬಂದಿದೆ. ಆದರೂ, 4,235 ಅರ್ಜಿಗಳ ರಿವ್ಯಾಲ್ಯು ವೇಷನ್‌ನಲ್ಲಿ ಆರಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸ ಕಂಡು ಬಂದಿದೆ.ಇದಕ್ಕೆ ಶಿಕ್ಷಕರು ನೇರವಾಗಿ ಜವಾಬ್ದಾರರು ಮತ್ತು ಈ ದೋಷಕ್ಕೆ ಅವರು ದಂಡವನ್ನು ಪಾವತಿಸಬೇಕಾಗಿದೆ ಎಂದರು.ಇನ್ನೂ ಪ್ರಮುಖವಾಗಿ ಅಂಕಗಳ ವ್ಯತ್ಯಾಸವು ಆರಕ್ಕಿಂತ ಹೆಚ್ಚಾದಾಗ ಸರ್ಕಾರವು ಮರುಮೌಲ್ಯಮಾಪನ ಮೊತ್ತವವನ್ನು ಪ್ರತಿ ಪೇಪರ್ ಗೆ 805 ರೂ. ನಂತೆ ಅರ್ಜಿ ದಾರರಿಗೆ ಮರುಪಾವತಿಸಿದೆ.2020ರಲ್ಲಿ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗಳನ್ನು ಮುಚ್ಚಿದ್ದರಿಂದ ಶಿಕ್ಷಕರಿಂದ ಪೆನಾಲ್ಟಿ ಸಂಗ್ರಹ ಕಡಿಮೆಯಾಗಿತ್ತು.ಹೀಗಾಗಿ ಶಾಲಾ ಅಧಿಕಾರಿಗಳು ಶಿಕ್ಷಕರಿಂದ ದಂಡ ವಸೂಲಿ ಮಾಡಿ ಕೊಡುವಂತೆ ಸರ್ಕಾರ ಸೂಚನೆ ನೀಡಿದೆ ಎಂದು ಸಚಿವ ಬಿ.ಸಿ ನಾಗೇಶ್ ಹೇಳಿದರು.ಜಿಲ್ಲೆಗಳಲ್ಲಿ ಉಪ ನಿರ್ದೇಶಕರು ಶಿಕ್ಷಕರಿಂದ ದಂಡವನ್ನು ಸ್ವೀಕರಿಸಲು ಸೂಚಿಸಲಾಗಿದೆ ಎಂದರು.
ಇನ್ನು ಎಸ್‌ಎಸ್‌ಎಲ್‌ಸಿ ಇರಲಿ,ಪಿಯುಸಿ ಇರಲಿ, ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಈ ಅವಾಂತರಗಳು ಪ್ರತಿವರ್ಷವೂ ಮರುಕಳಿಸುತ್ತಲೇ ಇವೆ.ಇದರಿಂದಾಗಿ ವಿದ್ಯಾರ್ಥಿಗಳು ಸಹ ತೊಂದರೆ ಅನುಭವಿಸುತ್ತಾರೆ. ಇಂತಿಷ್ಟು ಮಾರ್ಕ್ಸ್ ಪಡೆಯಬಹುದೆಂಬ ನಿರೀಕ್ಷೆ ಹೊಂದಿದ ವಿದ್ಯಾರ್ಥಿಗಳಿಗೆ ಶಿಕ್ಷಕರ ಈ ಮೌಲ್ಯಮಾಪನ ದೋಷ ಮತ್ತಷ್ಟು ಸಂಕಷ್ಟ ತರುತ್ತದೆ.ಹೀಗಾಗಿ ಮೌಲ್ಯಮಾಪನ ಸಂದರ್ಭದಲ್ಲಿ ಇಂತಹ ತಪ್ಪುಗಳು ನಡೆಯದಂತೆ ನೋಡಿ ಕೊಳ್ಳಲು ಸರ್ಕಾರ ದಂಡ ಪಾವತಿಯನ್ನು ಮಾನದಂಡವ ನ್ನಾಗಿ ಪ್ರಯೋಗಿಸುತ್ತಿದೆ.ಶಿಕ್ಷಕರ ಈ ಪ್ರಕ್ರಿಯೆ ಮಕ್ಕಳ ಭವಿಷ್ಯವನ್ನೂ ನಿರ್ಧರಿಸುವುದರಿಂದ ಶಿಕ್ಷಕರು ಎಚ್ಚರಿಕೆ ಯಿಂದ ಇರಬೇಕು.ಮತ್ತು ಅಂತವರ ವಿರುದ್ಧ ಬಿಗಿ ಕ್ರಮಗ ಳಿದ್ದರೆ ಒಳ್ಳೆಯದು ಎಂದರು.