ಶಿಕ್ಷಕರ ವರ್ಗಾವಣೆ ವಿಚಾರ ಸಿಡಿದೆಳಲು ಪ್ಲಾನ್ ಮಾಡಿದ ಶಿಕ್ಷಕರು ಬೆಂಗಳೂರು ಚಲೋ ಗೆ ಸಿದ್ದತೆ…..

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರು ತಾಳ್ಮೆಯಿಂದ ಕಾದು ಕಾದು ಬೇಸತ್ತಿದ್ದಾರೆ‌.ನೂರೆಂಟು ನಿಯಮಗಳು ಕಾಯಿದೆಗಳ ನಡುವೆ ಅವೈಜ್ಞಾನಿಕ ನೀತಿಯಿಂದಾಗಿ ಶಿಕ್ಷಕರು ಬೇಸತ್ತಿದ್ದಾರೆ.ವರ್ಗಾವಣೆ ಆಗುತ್ತದೆ ಇಲ್ಲ ಎಂಬ ಆತಂಕದಲ್ಲಿ ಇದ್ದಾರೆ.

ಈವರೆಗೆ ವರ್ಗಾವಣೆ ವಿಚಾರದಲ್ಲಿ ಕಾದು ಕಾದು ಬೇಸತ್ತಿರುವ ಶಿಕ್ಷಕರು ಈಗ ಅಂತಿಮವಾಗಿ ಬೆಂಗಳೂರು ಚಲೋ ಗೆ ಮುಂದಾಗಿದ್ದಾರೆ.ನಾಡಿನ ಶಿಕ್ಷಕರ ಧ್ವನಿಯಾಗಿರುವ ಸಂಘಟನೆಯ ನಾಯಕರು ಮೌನವಾಗಿದ್ದಾರೆ. ಇತ್ತ ಶಿಕ್ಷಣ ಸಚಿವರು ಕೂಡಾ ತುಟಿ ಪಿಟಕ್ ಎನ್ನುತ್ತಿಲ್ಲ ಹೀಗಾಗಿ ಬೇಸತ್ತಿರುವ ಶಿಕ್ಷಕರು ಹೋರಾಟಕ್ಕೆ ಯೋಚನೆ ಮಾಡತಾ ಇದ್ದಾರೆ

ಹೋರಾಟ ಒಂದೇ ವರ್ಗಾವಣೆಗೆ ಅಂತಿಮ ಮಾರ್ಗ ಎನ್ನುತ್ತಾ ಕಳೆದ ಒಂದು ವಾರದಿಂದ ಶಿಕ್ಷಕ ಬಂಧುಗಳು ಒಮ್ಮತದ ಅಭಿಪ್ರಾಯ ತಗೆದುಕೊಂಡು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ

ಶಿಕ್ಷಕರ ಸ್ವೇಹಿಯಲ್ಲದ ಈ ಒಂದು ಅವೈಜ್ಞಾನಿಕ ವರ್ಗಾವಣೆಯ ನೀತಿಯಿಂದಾಗಿ ಇದಕ್ಕೆ ಪ್ರತಿಯಾಗಿ ರಾಜ್ಯದ ಶಿಕ್ಷಕರು ಸಿಡಿದೇಳುವ ಕಾಲ ಸನ್ನಿಹಿತ ವಾಗಿದೆ ಸದ್ಯದಲ್ಲೇ ಎಲ್ಲಾ ಶಿಕ್ಷಕರು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನಿರೂಪಿಸಬೇಕಷ್ಟೆ ಎನ್ನುತ್ತಾ ನನ್ನ ಹೂರಾಟ ನನ್ನ ವರ್ಗಾವಣೆಗಾಗಿ ಎಂದು ಎಲ್ಲಾ ಶಿಕ್ಷಕರು ಬೆಂಗಳೂರು ಚಲೊ ಹೋರಾಟಕ್ಕೆ ಸಿದ್ದರಾಗಿ ಎಂದು ಕರೆ ಕೋಡುತ್ತಿದ್ದು ಶಿಕ್ಷಕರು ಸಿಡಿದೆಳುವ ಮುನ್ನವೇ ಸರ್ಕಾರ ಸ್ಪಂದಿಸಿ ಶಿಕ್ಷಕರ ಸ್ನೇಹಿ ವರ್ಗಾವಣೆಗೆ ಮುಂದಾಗಿ ನೆರವಾಗುತ್ತಾರೆನಾ ಎಂಬುದನ್ನು ಕಾದು ನೋಡಬೇಕು.
???

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.