ಬೆಂಗಳೂರು –
ಹೌದು ಅತ್ತ ರಾಜ್ಯ ಸರ್ಕಾರದ ಮೊದಲ ಅಧಿವೇಶನ ಆರಂಭವಾಗುತ್ತಿದಂತೆ ಇತ್ತ ಕೆಲ ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಕರು ಪ್ರತಿಭಟನೆ ಯನ್ನು ಮಾಡತಾ ಇದ್ದಾರೆ.ಹೌದು ಶಿಕ್ಷಕರ ನೇಮ ಕಾತಿ ಆದೇಶ ಪ್ರತಿಯನ್ನು ನೀಡುವಂತೆ ಒತ್ತಾ ಯಿಸಿ ಶಿಕ್ಷಕರು ರಾಜ್ಯ ಸರ್ಕಾರದ ವಿರುದ್ಧ ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.
ಹೊಸ ಸರ್ಕಾರದ ಜಂಟಿ ಹಾಗೂ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಪ್ರತಿಭಟ ನೆಗಳ ಕಾವು ಜೋರಾಗಿದೆ.ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾ ದರೂ ಆದೇಶ ಪ್ರತಿ ನೀಡದ ಸರ್ಕಾರದ ವಿರುದ್ಧ ಅಭ್ಯರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ
2022ರ ಮೇ ನಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದಿದ್ದ 70 ಸಾವಿರ ಅಭ್ಯರ್ಥಿಗಳಲ್ಲಿ 13,352 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆ ಪೈಕಿ ನೇಮಕಾತಿಯಲ್ಲಿ ಕಾನೂನು ಗೊಂದಲದ ವಿದೆ ಎಂದು ಕೆಲವರು ನ್ಯಾಯಾಲಯದ ಮೆಟ್ಟಿ ಲೇರಿದ್ದರು.
ಇದೇ ಕಾರಣದಿಂದಾಗಿ ಯಾವುದೇ ಕಾನೂನು ತೊಡಕಿಲ್ಲದೇ ಆಯ್ಕೆಯಾದ ಅಭ್ಯರ್ಥಿಗಳಿಗೂ ಸಮಸ್ಯೆಯಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿ ಗಳ ದಾಖಲಾತಿಗಳನ್ನು ಪಡೆದಿರುವ ಸರ್ಕಾರ, ಆದೇಶ ಪ್ರತಿ ನೀಡುತ್ತಿಲ್ಲ ಎಂದು ಅಭ್ಯರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ.ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದನ್ನು ಪ್ರತಿನಿತ್ಯ ಮಾಧ್ಯ ಮಗಳಲ್ಲಿ ನೋಡುತ್ತಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿ ಯೂ ಅಭ್ಯರ್ಥಿಗಳ ದಾಖಲಾತಿಗಳ ನೈಜತೆಯ ಪರಿಶೀಲನೆ ಪ್ರಾರಂಭಿಸಿದರೂ ಸಹ ನೇಮಕಾತಿ ಪ್ರಕ್ರಿಯೆ ಚುರುಕುಗೊಳ್ಳುತ್ತಿಲ್ಲ.
ಪರೀಕ್ಷೆ ನಡೆದು ವರ್ಷವೇ ಕಳೆದರೂ ಕೂಡಾ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹಾಗೂ ಸ್ಥಳ ನಿಯುಕ್ತಿಗೊಂಡಿರುವುದಿಲ್ಲ.ಇದರಿಂದಾಗಿ ಖಾಸಗಿ ಶಾಲೆಗಳಲ್ಲಿ ನಿರ್ವಹಿಸುತ್ತಿದ್ದ ತಾತ್ಕಾಲಿಕ ಉದ್ಯೋಗವೂ ಇಲ್ಲದಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡು ಹೋರಾಟ ಮಾಡುತ್ತಿದ್ದಾರೆ.
ಮೂಲ ದಾಖಲಾತಿಗಳನ್ನು ಇಲಾಖೆಯ ವಶಕ್ಕೆ ನೀಡಿರುವುದರಿಂದ ಬೇರೆ ಕಡೆಗಳಲ್ಲಿ ಕೆಲಸಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ. ಹೊಸದಾಗಿ ಆಯ್ಕೆ ಯಾದ ಶಿಕ್ಷಕರು ನೇಮಕಾತಿ ಆದೇಶ ಸಿಗದಿರುವು ದರಿಂದ ತಮ್ಮ ತಮ್ಮ ಕುಟುಂಬದ ನಿರ್ವಹಣೆ ಕಷ್ಟವಾಗಿದೆ.ಮತ್ತೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ ನಂತರ ಲೋಕಸಭಾ ಚುನಾವಣೆ ಗಳು ಬರಲಿದ್ದು ಹೀಗಾಗಿ ನೀತಿ ಸಂಹಿತೆ ಬರಲಿದೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಅಭ್ಯರ್ಥಿಗಳು ತಮ್ಮ ಸಂಕಷ್ಟದ ಬಗ್ಗೆ ಹೇಳಿಕೊ ಳ್ಳುತ್ತಾ ಹೋರಾಟವನ್ನು ಮಾಡುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..