ಬೆಂಗಳೂರು –
ಮಹಾಮಾರಿ ಕರೋನ ಆರ್ಭಟ ರಾಜ್ಯದಲ್ಲಿ ಹೆಚ್ಚಾ ಗುತ್ತಿದೆ.ರಾಜ್ಯದ ತುಂಬಾ ಅಬ್ಬರಿಸುತ್ತಿದ್ದು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿದೆ.ಇನ್ನೂ ಅಂಕಿ ಸಂಖ್ಯೆ ಕೂಡಾ ಹೆಚ್ಚಾಗುತ್ತಿದ್ದು ಇದರೊಂದಿಗೆ ಸಾವಿನ ಸಂಖ್ಯೆ ಕೂಡಾ ಹೆಚ್ಚಾಗಿ ರಾಜ್ಯದಲ್ಲಿ ಕಂಡು ಬರುತ್ತಿದ್ದು ಇದಕ್ಕೆ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ಸಾವಿಗೀಡಾಗುತ್ತಿದ್ದಾರೆ

ಹೌದು ಇಂದು ಒಂದೇ ದಿನ ರಾಜ್ಯದ ತುಂಬೆಲ್ಲಾ ಏಳು ಜನ ಶಿಕ್ಷಕರು ಸಾವಿಗೀಡಾಗಿದ್ದಾರೆ. ಬೇರೆ ಬೇರೆ ಖಾಯಿಲೆಯಿಂದ ಬಳಲುತ್ತಿದ್ದವರು ಮತ್ತು ಕರೋ ನಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಶಿಕ್ಷಕರು ನಾಡಿನ ಬೇರೆ ಬೇರೆ ಕಡೆಗಳಲ್ಲಿ ಸಾವಿಗೀಡಾಗಿದ್ದಾರೆ.ಹೀಗೆ ರಾಜ್ಯದ ತುಂಬೆಲ್ಲಾ ಏಳು ಇಂದು ಅಲ್ಲಲ್ಲಿ ನಿಧನರಾ ಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ತುಂಬಲಾರದ ದುಖಃವಾಗಿದೆ.ಇನ್ನೂ ರಾಜ್ಯದಲ್ಲಿ ಒಟ್ಟು ಹತ್ತಕ್ಕೂ ಹೆಚ್ಚು ಶಿಕ್ಷಕರು ಸಾವಿಗೀಡಾಗಿದ್ದು ಎಲ್ಲಿ ಎಲ್ಲಿ ಯಾರು ಯಾರು ಸಾವಿಗೀಡಾಗಿದ್ದಾರೆ ಎಂಬ ಕುರಿತಂತೆ ನೊಡೋದಾದರೆ

ಆರ್ ಎನ್ ಲೋನಿ ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರು. ಕೋವಿಡ್ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆಯನ್ನು ಪಡೆಯುತ್ತಿದ್ದರು ಚಿಕಿತ್ಸೆ ಫಲಿಸದೇ ಇಂದು ಸಾವಿಗೀಡಾಗಿದ್ದಾರೆ.

ನಿಂಗಮ್ಮ ರೊಳ್ಳಿ ಬಸವನ ಬಾಗೇವಾಡಿಯ ಹತ್ತರಕಿ ಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು.ಇವರಿಗೂ ಕೂಡಾ ಸೋಂಕು ಕಾಣಿಸಿಕೊಂಡು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ಇಂದು ಆಸ್ಪತ್ರೆಯಲ್ಲಿ ಕೋವಿಡ್ ಗೆ ಸಾವಿಗೀಡಾಗಿದ್ದಾರೆ.

ಇನ್ನೂ ಮುಸ್ಕಾಕ್ ಹೊಂಬರ್ಡಿ ದೈಹಿಕ ಶಿಕ್ಷಕರು ಇಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇವರಿ ಗೂ ಕೂಡಾ ಕಳೆದ ಒಂದು ವಾರದ ಹಿಂದೆ ಸೋಂಕು ಕಾಣಿಸಿಕೊಂಡಿತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಮುಸ್ತಾಕ್ ಸರ್ ಇಂದು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಇನ್ನೂ ಎ ಎನ್ ಅವಟಿ ದೈಹಿಕ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅತಾಲಟ್ಟಿ ಇವರು ಕೂಡಾ ಮಹಾಮಾರಿಗೆ ಸಾವಿಗೀಡಾಗಿದ್ದಾರೆ.

ಇದರೊಂದಿಗೆ ಬಿ ಎಸ್ ಹಳ್ಳಿ ಮುಖ್ಯೋಪಾಧ್ಯಾಯ ರು ಸರ್ಕಾರಿ ಪ್ರಾಥಮಿಕ ಶಾಲೆ ಮಹಾತ್ಮ ಗಾಂಧೀ ಪ್ರೌಢ ಶಾಲೆ ವಿಜಯಪುರ ಇವರು ಕೂಡಾ ಇಂದು ಸಾವಿಗೀಡಾಗಿದ್ದಾರೆ. ಕೋವಿಡ್ ಸೋಂಕು ಹಿನ್ನಲೆ ಯಲ್ಲಿ ಇವರು ಕೂಡಾ ಖಾಸಗಿ ಆಸ್ಪತ್ರೆಗೆ ದಾಖಲಾಗಿ ದ್ದರು.

ಡಿ ಬಿ ಧನಶೆಟ್ಟಿ ಹಿಂದಿ ಶಿಕ್ಷಕರು ಯಲ್ಲಾಲಿಂಗ ಪ್ರೌಢ ಶಾಲೆ ಇಂಡಿಯ ಮಿರಗಿ ಗ್ರಾಮದ ಶಿಕ್ಷಕರು ಇವರು ಕೂಡಾ ನಿಧನರಾಗಿದ್ದಾರೆ.ಇದರೊಂದಿಗೆ ಗುರುನಾಥ ಭಂಡಾರಕರ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಗೋಳ ಸಾರ ಹಾಗೇ ಈರಪ್ಪ ಮಲಬಾರಿ ಪ್ರಾಚಾರ್ಯರು ಮೊರಾರ್ಜಿ ವಸತಿ ಶಾಲೆ ದೇವರಹಿಪ್ಪರಗಿ ಇವರು ಕೂಡಾ ಈ ಒಂದು ಮಹಾಮಾರಿಗೆ ಬಲಿಯಾಗಿದ್ದಾ ರೆ.

ಹೀಗೆ ಇಂದು ಒಂದೇ ದಿನ ರಾಜ್ಯದ ತುಂಬೆಲ್ಲಾ ಒಟ್ಟು ಹತ್ತಕ್ಕೂ ಹೆಚ್ಚು ಶಿಕ್ಷಕರು ಸಾವಿಗೀಡಾಗಿದ್ದಾರೆ.

ನಾಡಿನ ತುಂಬೆಲ್ಲಾ ಮೃತರಾದ ಶಿಕ್ಷಕರಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ ಅಶೋಕ ಸಜ್ಜನ,ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,.ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗವೇಣಿ, ಇಂದಿರಾ.ಮುಕಾಂಬಿಕಾ ಭಟ್. ನಾಗರತ್ನ, ಲಕ್ಷ್ಮೀದೇ ವಮ್ಮ,ಎಂ ವಿ,ಕುಸುಮಾ ಎಸ್ ಹೊಳೆಯಣ್ಣನವ ರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಹನ ಮಂತಪ್ಪ ಬೂದಿಹಾಳ ಸೇರಿದಂತೆ ಹಲವರು ಸಂತಾ ಪವನ್ನು ಸೂಚಿಸಿದ್ದಾರೆ.