ಮಂಡ್ಯ –
ಭೀಕರ ಅಪಘಾತ ಮುಖ್ಯಶಿಕ್ಷಕ ಸಾವು ಮುಖ್ಯಶಿಕ್ಷಕನ ಬೈಕ್ ಗೆ ಡಿಕ್ಕಿಯಾದ ಕಾರು ಸ್ಥಳದಲ್ಲೇ ಸಾವಿಗೀಡಾದ ರಾಮಕೃಷ್ಟೇಗೌಡರು
ಬೈಕ್ ಗೆ ಕಾರೊಂದು ಡಿಕ್ಕಿಯಾದ ಪರಿಣಾಮ ವಾಗಿ ಮುಖ್ಯಶಿಕ್ಷಕರೊಬ್ಬರು ಸ್ಧಳದಲ್ಲೇ ಸಾವಿಗೀಡಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಇಜ್ಜಲಘಟ್ಟ ಗ್ರಾಮದಿಂದ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಎದುರಿಗೆ ಬಂದ ಕಾರು ಬೈಕ್ ಗೆ ಡಿಕ್ಕಿಯಾಗಿದೆ.ತೀವ್ರವಾಗಿ ಗಾಯಗೊಂಡ ಮುಖ್ಯಶಿಕ್ಷಕ ರಾಮಕೃಷ್ಟೇಗೌಡರು ಸ್ಥಳದಲ್ಲೇ ಮೃತರಾದರು.
ನಾಗಮಂಗಲ ತಾಲೂಕಿನ H. ಭುವನಹಳ್ಳಿ ಗ್ರಾಮದ ಶಿಕ್ಷಕ ರಾಮಕೃಷ್ಣೇಗೌಡ ಅವರು ಇಜ್ಜಲಘಟ್ಟ ಗ್ರಾಮದಿಂದ ಶಾಲೆ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುವ ವೇಳೆ ಅಪಘಾತ ಸಂಭವಿಸಿದೆ.ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣೇ ಗೌಡ ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮನೆಗೆ ಮರಳುವ ವೇಳೆ ಕಾರು ಮತ್ತು ಬೈಕ್ ನಡುವೆ ಈ ಒಂದು ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ದೂರ ಹೋಗಿ ಬಿದ್ದಿದೆ.ರಾಮಕೃಷ್ಣೇಗೌಡ ಅವರು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.ಕಾರು ಕೂಡಾ ದೂರ ಎಲ್ಲೋ ಹೋಗಿ ನಿಂತಿದ್ದು ಚಾಲಕನಿಗೂ ಗಾಯಗಳಾಗಿವೆ.
ಅಪಘಾತದ ಸುದ್ದಿಯನ್ನು ತಿಳಿದ ಬಿಂಡಿಗನವಿಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ ಪರಿಶೀಲನೆ ಮಾಡಿ ಪ್ರಕರಣವನ್ನು ದಾಖಲು ಮಾಡಿಕೊಂ ಡಿದ್ದು ತನಿಖೆಯನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಮಂಡ್ಯ…..