ಚಿತ್ರದುರ್ಗ –
ಶಾಲಾ ವಾಹನಕ್ಕೆ ದ್ವಿಚಕ್ರ ವಾಹನ ವೊಂದು ಡಿಕ್ಕಿಯಾಗಿ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ತಾಲೂಕಿನ ನಂದಿಹಳ್ಳಿ ಬಳಿ ಸಂಭವಿಸಿದೆ.
ಬಹದ್ದೂರ್ ಘಟ್ಟ ಗ್ರಾಮದ ಕಲ್ಲಮ್ಮ ಪ್ರೌಢಶಾಲೆ ಶಿಕ್ಷಕ ಪ್ರದೀಪ್(40) ಮೃತರಾಗಿದ್ದಾರೆ.ಶನಿವಾರ ಬೆಳಗ್ಗೆ ತರಗತಿಗೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು.ಮಾರ್ಗಮಧ್ಯೆ ನಂದಿ ಹಳ್ಳಿ ಬಳಿ ಸ್ಕೂಲ್ ಬಸ್ ಮತ್ತು ದ್ವಿಚಕ್ರ ವಾಹನ ಮುಖಾ ಮುಖಿ ಡಿಕ್ಕಿಯಾಗಿದೆ.ಗಂಭೀರ ಗಾಯಗೊಂಡ ಶಿಕ್ಷಕ ಸ್ಥಳ ದಲ್ಲೇ ಕೊನೆಯುಸಿರೆಳೆದಿದ್ದಾರೆ.ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















