ಭೀಕರ ಅಪಘಾತ ಶಿಕ್ಷಕ ಸ್ಥಳದಲ್ಲೇ ಸಾವು – ಕಾರು ಬೈಕ್ ನಡುವೆ ಡಿಕ್ಕಿ…..

Suddi Sante Desk
ಭೀಕರ ಅಪಘಾತ ಶಿಕ್ಷಕ ಸ್ಥಳದಲ್ಲೇ ಸಾವು – ಕಾರು ಬೈಕ್ ನಡುವೆ ಡಿಕ್ಕಿ…..

ಬೀದರ್

ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಸರಕಾರಿ ಶಾಲಾ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಹಾಲಹಿಪ್ಪರಗಾ ಕ್ರಾಸ್ ಬಳಿ ನಡೆದಿದೆ. ಭಾತಾಂಬ್ರಾ ಮೂಲದ ನಿವಾಸಿ ಕಾಶಿನಾಥ ಪಾಂಚಾಳ ಮೃತ ಶಿಕ್ಷಕ ಎಂದು ಗುರುತಿಸಲಾಗಿದೆ

ಮೇತಿ ಮೆಳಕುಂದಾ ಗ್ರಾಮದಲ್ಲಿ ಸರಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.ಕೆಲಸಕ್ಕೋಸ್ಕರ ಬೀದರ್ ನಗರಕ್ಕೆ ಹೋಗಿದ್ದರು.ನಗರದಿಂದ ಊರಿಗೆ ತೆರಳುತ್ತಿರುವಾಗ ಭಾಲ್ಕಿ-ಬೀದರ್ ಮುಖ್ಯರಸ್ತೆಯ ಹಾಲಹಿಪ್ಪರಗಾ ಕ್ರಾಸ್ ಬಳಿ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಕುರಿತು ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೀದರ್ …..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.