ಹಿಂದಿನ ಬರಗೂರು ರಾಮಚಂದ್ರಪ್ಪ ಪಠ್ಯ ಪುಸ್ತಕ ಪರಿಷ್ಕ ರಣೆ ಸಮಿತಿಯು ಮಾಡಿದ್ದ ಎಡವಟ್ಟುಗಳನ್ನು ಪಟ್ಟಿ ಮಾಡಿ ಶಿಕ್ಷಣ ಇಲಾಖೆ ಬುಕ್ ಲೆಟ್ ಸಿದ್ದಪಡಿಸಿದ್ದು ಅದನ್ನು ಬಿಡುಗಡೆ ಮಾಡಿ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿಯ ಪಠ್ಯ ಪರಿಷ್ಕರಣೆ ವಿರೋಧಿಸಿದವರಿಗೆ ಕೌಂಟರ್ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಸಮಿತಿಯ 150 ಕ್ಕೂ ಹೆಚ್ಚು ತಪ್ಪುಗಳನ್ನು ಪತ್ತೆ ಹಚ್ಚಿರುವ ಶಿಕ್ಷಣ ಇಲಾಖೆ.ಈ ತಪ್ಪುಗಳ ಬುಕ್ ಲೆಟ್ ಅನ್ನು ಇಂದು ಸಚಿವ ಆರ್ ಅಶೋಕ್ ಬಿಡುಗಡೆ ಮಾಡಿದ್ದಾರೆ.


