ಬೆಂಗಳೂರು –
ಮಹಾಮಾರಿ ಕರೋನ ನಡುವೆ ಅಂತೂ ಇಂತೂ SSLC ಪರೀಕ್ಷೆ ಗಳು ಮುಗಿದಿವೆ. ನಿನ್ನೆ ಆರಂಭ ಗೊಂಡ ಪರೀಕ್ಷೆಗಳು ರಾಜ್ಯದಲ್ಲಿ ಎರಡು ದಿನಗಳ ಮುಗಿದಿವೆ.ಇನ್ನೂ ಈ ಒಂದು ಪರೀಕ್ಷೆ ಯಶಸ್ವಿ ಯಾಗಿ ಕಾರಣ ಶಿಕ್ಷಣ ಇಲಾಖೆ ಶಿಕ್ಷಕರು ಸೇರಿದಂತೆ ಜಿಲ್ಲಾ ಮಟ್ಟದ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಜಿಲ್ಲಾಡಳಿತ ಸೇರಿದಂತೆ ಎಲ್ಲರೂ ಶ್ರಮ ದಿಂದ ಪರೀಕ್ಷೆ ಗಳು ಸುಸೂತ್ರವಾಗಿ ಮುಗಿದಿವೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.ಇನ್ನೂ ಪರೀಕ್ಷೆ ಮುಗಿಯುತ್ತಿದ್ದಂತೆ ಇತ್ತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು 2020-21 ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಯುವಂತೆ ಸಹಕರಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ

ಇನ್ನೂ ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲಾ ಧೀರ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು ಎಂದು ಸಚಿವರು ಉಲ್ಲೇಖ ಮಾಡಿ ಟ್ವೀಟ್ ಮಾಡಿದ್ದಾರೆ. ಇದು ಸರಿಯಾದ ಮಾತು ಆದರೆ ಇದರಲ್ಲಿ ಹೆಚ್ಚು ಕೆಲಸ ಮಾಡಿದವರು ಶಿಕ್ಷಣ ಇಲಾಖೆಯ ಅಧಿಕಾರಿ ಗಳು ಮತ್ತು ಶಿಕ್ಷಕರು ಇವರನ್ನು ಒಂದೇ ಒಂದು ಶಬ್ದ ಹಾಕಿ ಉಲ್ಲೇಖ ಮಾಡಬಹುದಿತ್ತು ಆದರೆ ಯಾಕೋ ಇಲಾಖೆಯ ಅಧಿಕಾರಿಗಳನ್ನು ಶಿಕ್ಷಕರನ್ನು ಮರೆತಿದ್ದು ವಿಷಾದದ ಸಂಗತಿಯಾಗಿದೆ.