ಬೆಂಗಳೂರು –
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಹಗರಣ ಸಂಬಂಧ ಬಂಧಿತರಾಗಿರುವ ಪತ್ರಕರ್ತರಲ್ಲಿ ಒಬ್ಬನಾದ ತುಮಕೂರಿನ ಶಿರಾ ಮೂಲದ ಕಿಂಗ್ ಪಿನ್ ಸಿಡಿ ಡೀಲ್ ದುಡ್ಡಲ್ಲಿ ಎರಡು ಐಶಾರಾಮಿ ಕಾರು ಖರೀದಿಸಲು ಮುಂದಾಗಿದ್ದ ಎಂದು ತಿಳಿದುಬಂದಿದೆ.
ಮಹೀಂದ್ರಾ ಎಕ್ಸ್ಯುವಿ-500 ಹಾಗೂ ಥಾರ್ ಜೀಪ್ ಖರೀದಿಸಲು ಆತ ಮುಂದಾಗಿದ್ದ ಎಂದು ಎಸ್ಐಟಿ ತನಿಖೆಗಳಿಂದ ತಿಳಿದುಬಂದಿದೆ. ಮಹೀಂದ್ರಾ ಕಾರು ಖರೀದಿಗೆ ಒಂದೂವರೆ ಲಕ್ಷ ಹಾಗೂ ಥಾರ್ ಜೀಪ್ಗಾಗಿ 25 ಸಾವಿರ ರೂ. ಅಡ್ವಾನ್ಸ್ ನೀಡಿದ್ದ ಎಂದು ಪೊಲೀಸರ ತನಿಖೆಯಿಂದ ಹೊರಬಂದಿದೆ.
ಆದರೆ ಈತ ಸಂಪೂರ್ಣ ಹಣವನ್ನು ನಗದು ರೂಪದಲ್ಲೇ ನೀಡುವುದಾಗಿ ಹೇಳಿದ್ದರಿಂದ ಅನುಮಾನಗೊಂಡ ಷೋರೂಂ ಸಿಬ್ಬಂದಿ ಒಂದೆರಡು ದಿನ ಕಾಯಿರಿ ಸರ್ ಎಂದು ಹೇಳಿ ಕಳಿಸಿದ್ದರಂತೆ.
ಫೆಬ್ರವರಿ 16ರಂದು ತನ್ನ ನಿರ್ಧಾರ ಬದಲಿಸಿದ್ದ ಆತ ಶೂರೂಂ ಮ್ಯಾನೇಜರ್ಗೆ ಇಮೇಲ್ ಮಾಡಿ ತನ್ನ ಹಣ ಮತ್ತು ಎಕ್ಸ್ಚೇಂಜ್ ಮಾಡಲು ನೀಡಲಾಗಿದ್ದ ಹಳೇ ಕಾರನ್ನು ನೀಡಿ ಎಂದು ಕೇಳಿದ್ದ. ಅದೇ ದುಡ್ಡಲ್ಲಿ ಕೊಡಗಿನಲ್ಲಿ ಕಾಫಿ ತೋಟ ಖರೀದಿಸ ಬೇಕೆಂದು ಯೋಜಿಸಿದ್ದ ಎನ್ನಲಾಗುತ್ತಿದ್ದು ಏನೇ ಆಗಲಿ ಸಿಡಿ ಡೀಲ್ ನಲ್ಲಿ ಏನೇನೂ ಕನಸು ಕಟ್ಟಿಕೊಂಡಿದ್ದ ಆ ಪತ್ರಕರ್ತ ನ ಹುಡುಕಾಟದಲ್ಲಿ ಪೊಲೀಸರು ಇದ್ದಾರೆ.