ರಾಯಚೂರು –
ಶಿಕ್ಷಕರು ಮನಸ್ಸು ಮಾಡಿದರೆ ಏನಾದರೂ ಸಾಧಿಸಬಲ್ಲರು ಏನಾದರೂ ಮಾಡಬಲ್ಲರು ಎಂಬೊ ದಕ್ಕೆ ಈ ಒಂದು ಘಟನೆ ಸಾಕ್ಷಿ.ರಾಯಚೂರು ಜಿಲ್ಲೆಯ ಗಂಜಹಳ್ಳಿ ಯ ಸರ್ಕಾರಿ ಪ್ರೌಢ ಶಾಲೆಯ ಪ್ರಧಾನ ಗುರುಗಳಾದ ವೆಂಕೋಬ ಅವರಿಗೆ ಮೊದಲು ಜ್ವರ ಕಾಣಿಸಿಕೊಂಡಿತ್ತು.ರಾಯಚೂರಿನಲ್ಲಿ ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆರೋಗ್ಯ ಪರಿಸ್ಥಿತಿ ತುಂಬಾ ತುಂಬಾ ವಿಷಮ ಸ್ಥಿತಿಯಾಯಿತು.ರಕ್ತದ ಅವಶ್ಯಕತೆ ಕಂಡು ಬಂದಿತು 0+ ರಕ್ತ ಬೇಕಾಗಿತ್ತು.ಇದು ಸಿಗೊದು ತುಂಬಾ ಅಪರೂಪ ಹೀಗಾಗಿ ರಾಯಚೂರು ಜಿಲ್ಲೆಯ ಶಿಕ್ಷಕರು ಅತಿ ತುರ್ತಾಗಿ ರಕ್ತ ಬೇಕಾಗಿದೆ ದಯವಿಟ್ಟು ಆಸಕ್ತರು ಸಂಪರ್ಕ ಮಾಡಿ ಎಂದು ಒಂದೇ ಒಂದು ಚಿಕ್ಕ ಸಂದೇಶವನ್ನು ಹಾಕಿದ್ದರು.ಈ ಒಂದು ಸಂದೇಶ ವೈರಲ್ ಆಗಿ ನಾಡಿನ ಶಿಕ್ಷಕರು ಸ್ಪಂದಿಸಿ ರಕ್ತ ದಾನ ಮಾಡಿದರು ಸಧ್ಯ ರಕ್ತ ಹಾಕಲಾಗಿದ್ದು ವೆಂಕೋಬ ಸಾರ್ ಗುಣಮುಖರಾಗಿದ್ದಾರೆ

ಸರಿಯಾಗಿ ಊಟವಿಲ್ಲದೆ ಕರ್ತವ್ಯ ನಿರ್ವಹಣೆ ಮಾಡಿ ಅನಾರೋಗ್ಯಕ್ಕೆ ತುತ್ತಾಗಿದ್ದರು.ನಂತರ ಡೆಂಗ್ಯೂ ಕಾಣಿಸಿಕೊಂಡು ರಕ್ತದ ಅವಶ್ಯಕತೆ ಕಂಡು ಬಂದು ಸಿಗದಿದ್ದಾಗ ಸಂದೇಶ ಹಾಕಲಾಯಿತು ಒಂದೇ ಒಂದು ಸಂದೇಶಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಯಿ ಸಾಕಷ್ಟು ಪ್ರಮಾಣದಲ್ಲಿ ರಕ್ತ ದಾನಿ ಗಳು ಮುಂದೆ ಬಂದು ನೆರವಾಗಿ ಜೀವ ಉಳಿಸಿದ್ದಾರೆ

ಸಧ್ಯ ವೆಂಕೋಬ ಸಾರ್ ಗುಣಮುಖರಾಗಿದ್ದು ಇನ್ನೇನು ಒಂದು ಅಥವಾ ಎರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ.ಇನ್ನೂ ಈ ಶಿಕ್ಷಕರ ಜೀವ ಉಳಿಯಲು ನೆರವಾದ ಸಂದೇಶ ಹಾಕಿದವರಿಗೂ ಸ್ಪಂದಿಸಿದ ಗುರು ವರ್ಯರಿಗೂ ದಾನಿಗಳಿಗ ಕಾರ್ಯ ಮೆಚ್ಚುವಂತಹದ್ದು ಶ್ಲಾಘನೀಯ